ಆರೋಗ್ಯ ಹಾಗೂ ಆಶಾ ಕಾರ್ಯಕರ್ತರಿಗೆ ಸೀರೆ ವಿತರಣೆ

ಬಸವಕಲ್ಯಾಣ:ಜೂ.2: ಇಲ್ಲಿನ ಬಿಜೆಪಿ ಶಾಸಕ ಶರಣು ಸಲಗರ ಅವರ ಜನ್ಮದಿನ ಅಂಗವಾಗಿ ಅವರ ಅಭಿಮಾನಿ ಬಳಗ ಮಂಗಳವಾರ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸೀರೆ ವಿತರಿಸಿ ಶಾಸಕರ ಜನ್ಮದಿನವನ್ನು ವಿನೂತನವಾಗಿ ಆಚರಿಸಿತು.

ಸತೀಶ ಪಾಟೀಲ್ ಹಾಗೂ ರತಿಕಾಂತ್ ಕೋಹಿನೂರ ನೇತೃತ್ವದ ಶಾಸಕರ ಅಭಿಮಾನಿ ಬಳಗವು ಮಂಗಳವಾರ ಕೋಹಿನೂರ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ 80 ಮಂದಿ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ತಲಾ ಒಂದೊಂದು ಸೀರೆ, ಮಾಸ್ಕ್, ಸ್ಯಾನಿಟೈಜರ್ ಹಾಗೂ ಸಿಹಿ ಡಬ್ಬಾ ವಿತರಿಸಿತು.

ರತಿಕಾಂತ್ ಕೋಹಿನೂರ ಮಾತನಾಡಿ, ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಕರೊನಾ ರೋಗಿಗಳನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವವರೆಗಿನ ಎಲ್ಲ ಹಂತಗಳಲ್ಲಿ ಅವರೊಂದಿಗಿರುತ್ತಾರೆ. ಕರೊನಾದಂಥ ಮಹಾಮಾರಿ ದಿನಗಳಲ್ಲಿ ತಮ್ಮ ಜೀವದ ಹಂಗು ತೊರೆದು ಸೇವೆ ನೀಡುವ ಇವರು ನೀಜವಾಗಲೂ ಕರೊನಾ ಸೇನಾನಿಗಳು. ಆರೋಗ್ಯ ಸೇವೆಯ ಮುಂಚೂಣಿ ಸೇವಕರು ಎಂದರು.

ರಾಜಕುಮಾರ ಸಿರಗಾಪೂರ, ಸತೀಶ ಪಾಟೀಲ್, ಶಿವಶರಣಪ್ಪ ಸಂತಾಜಿ, ರತಿಕಾಂತ ಕೋಹಿನೂರ, ಅನಿಲ್ ಮಣಕೋಜಿ, ಸತೀಶ ಮಾಡೋಳೆ, ಆಕಾಶ ಪಾಟೀಲ್, ಭೀಮಾಶಂಕರ ಪಾಟೀಲ್, ಅಜಯ ಬಿರಾದಾರ, ಇನ್ನಿತರರಿದ್ದರು.