ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಿಂದ ಹೋಟೆಲ್‌ಗಳ ಪರಿವೀಕ್ಷಣಗೆ

ದಾವಣಗೆರೆ ಜ.೧೪; ಮಹಾನಗರಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜಯಮ್ಮ ಗೋಪಿನಾಯ್ಕ ಇವರು  ಸಿ.ಜಿ ಆಸ್ಪತ್ರೆ ರಸ್ತೆಯಲ್ಲಿನ ಎಲ್ಲಾ ಹೋಟೆಲ್‌ಗಳಿಗೆ ಭೇಟಿ ನೀಡಿ ಸ್ವಚ್ಚತೆ ಹಾಗೂ ಉದ್ದಿಮೆ ಪರವಾನಿಗೆಯನ್ನು ಪರಿಶೀಲಿಸಿದರು. ಹಾಗೂ ಸ್ವಚ್ಚತೆ ನಿರ್ವಹಿಸದೇ ಇರುವ ಹೋಟೆಲ್‌ಗಳಿಗೆ ನೋಟಿಸ್ ನೀಡುವಂತೆ ಆರೋಗ್ಯ ನಿರೀಕ್ಷಕರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯ ನಿರೀಕ್ಷಕರಾದ ನಿಖಿಲ್ ಜೆ.ಹೆಚ್, ಮಂಜುನಾಥ್ ಹಾಗೂ ಸೂಪರ್‌ವೈಸರ್ ಹಾಜರಿದ್ದರು.