ಆರೋಗ್ಯ ಸೌಲಭ್ಯಗಳು ಸಾರ್ವತ್ರಿಕವಾಗಿ ದೊರೆಯಲಿ

ಕಲಬುರಗಿ:ಮಾ.23: ಆರೋಗ್ಯ ಸಂಪತ್ತು ದೊಡ್ಡದು. ಸಮಾಜದಲ್ಲಿರುವ ಆರೋಗ್ಯ ಸೌಲಭ್ಯಗಳು ಶ್ರೀಮಂತರು, ಉಳ್ಳವರಿಗೆ ಮಾತ್ರ ದೊರೆತರೆ ಪ್ರಯೋಜನೆಯಿಲ್ಲ. ಸಮಾಜದಲ್ಲಿರುವ ಬಡವರು, ದುರ್ಬಲ ವರ್ಗದವರಿಗೆ ಆರೋಗ್ಯ ಸೌಲಭ್ಯಗಳು ದೊರೆಯಬೇಕಾಗಿದೆ ಎಂದು ಕುಟುಂಬ ವೈದ್ಯ ಡಾ.ನಿಕಿಲ್ ಆರ್.ಗೈಧನಕರ್ ಹೇಳಿದರು.

   ನಗರದ ಆಳಂದ ರಸ್ತೆಯ ವಿಶ್ವರಾಧ್ಯ ದೇವಸ್ಥಾನದ ಸಮೀಪದ ಮತ್ತಿಮಡು ಕಾಂಪೆಕ್ಸ್‍ನಲ್ಲಿ ಬುಧವಾರ ಪ್ರಾರಂಭವಾದ 'ಎನ್‍ಆರ್‍ಜಿ ಮೆಡಿಕಲ್ ಅಡ್ವಂಟೇಜಸ್' ಕಾರ್ಯಕ್ರಮದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
    ನಮ್ಮ ಕ್ಲಿನಿಕ್ ಹಣ ಗಳಿಸಬೇಕು ಎಂಬ ಉದ್ದೇಶದಿಂದ ಆರಂಭಿಸಿಲ್ಲ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ, ಬಡವರಿಗೆ ಶೇ.50ರಷ್ಟು ವಿನಾಯತಿಯೊಂದಿಗೆ ತಪಾಸಣೆ ಮತ್ತು ಔಷಧ ನೀಡುವ ಉದ್ದೇಶ ನಮ್ಮದಾಗಿದೆ. ಕಾಯಿಲೆಗೆ ಅವಶ್ಯಕತೆಗೆ ತಕ್ಕಷ್ಟು ಮಾತ್ರ ಚಿಕತ್ಸೆ, ಔಷಧ ಮತ್ತು ಅನಿವಾರ್ಯವಿದ್ದಾಗ ಮಾತ್ರ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಒಟ್ಟಾರೆಯಾಗಿ ನಮ್ಮ ಸಂಸ್ಥೆಯ ಗುರಿ ಸಮಾಜದಲ್ಲಿರುವ ಎಲ್ಲರಿಗೂ ಆರೋಗ್ಯ ದೊರೆಯಬೇಕು ಎಂಬುದಾಗಿದೆ. ಇದೇ ದಿ.26ರ ಭಾನುವಾರದಂದು ಒಂದು ದಿನದ ಉಚಿತ ಆರೋಗ್ಯ ತಪಾಸಣೆ ಏರ್ಪಡಿಸಲಾಗಿದ್ದು, ಇದರ ಸದುಪಯೋಗವನ್ನು ಪಡೆಯಲು ಇದೇ ಸಂಧರ್ಭದಲ್ಲಿ ಅವರು ತಿಳಿಸಿದರು.
  ಇದಕ್ಕು ಮೊದಲು ಜರುಗಿದ ಕಾರ್ಯಕ್ರಮದಲ್ಲಿ 'ಎನ್‍ಆರ್‍ಜಿ ಮೆಡಿಕಲ್ ಅಡ್ವಂಟೇಜಸ್'ಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾಯ ಯಡ್ರಾಮಿ ಉದ್ಘಾಟಿಸಿದರು. ಗುರುರಾಜ ಬಿ.ಮತ್ತಿಮಡು ಜ್ಯೋತಿ ಬೆಳಗಿಸಿದರು.
 ಡಾ.ರಾಜೇಶ್ವರಿ, ಡಾ.ಪಂಕಜಾ, ರಾಜಕುಮಾರ ಜಿ.ಡಿಗ್ಗಿ, ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ನೀಲಕಂಠಯ್ಯ ಹಿರೇಮಠ, ಕೇದಾರನಾಥ ಕುಲಕರ್ಣಿ ನಾವದಗಿ, ಆನಂದ ರಡ್ಡಿ, ಗುರುನಾಥ ದೇವಣಗಾಂವ, ಜ್ಯೋತಿಲಾಲ್ ಜಾಧವ, ವೇದಾಶ್ರೀ, ಅಲ್ತಾಫ್, ಶಾಂತಪ್ಪ ಮುತ್ತ್ಯಾ, ಧರ್ಮು ಹತಗುಂದಿ ಸೇರಿದಂತೆ ಮತ್ತಿತರರಿದ್ದರು.