ಆರೋಗ್ಯ ಸೇವೆ ಜಾಗೃತಿಗಾಗಿ ಬೀದಿ ನಾಟಕ

ಹೊಸಪೇಟೆ ಮಾ30 : ಆಯುμÁ್ಮನ ಭಾರತ ಆರೋಗ್ಯ ಕರ್ನಾಟಕ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಆರೋಗ್ಯ ಸೇವೆಗಳ ಕುರಿತು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸೋಮವಾರ ಬೀದಿ ನಾಟಕ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಯಿತು.
ತಾಲ್ಲೂಕಿನ 88 ಮುದ್ಲಾಪುರ, ನಾಗೇನಹಳ್ಳಿ, ಕಾಕುಬಾಳು, ಸೀತಾರಾಮ ತಾಂಡದಲ್ಲಿ ಬೀದಿ ನಾಟಕ ಪ್ರದರ್ಶನ ಮೂಲಕ ಸಾರ್ವಜನಿಕರು, ಆರೋಗ್ಯ ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿ, ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ತಾಯಿ, ಮಗು ಆರೈಕೆ, ಯೋಗಾಭ್ಯಾಸ, ಸಾಂಕ್ರಾಮಿಕ ರೋಗ-ರುಜಿನಗಳ ಕುರಿತು ಮಾಹಿತಿ ನೀಡಲಾಯಿತು.
ಆರೋಗ್ಯ ಅಧಿಕಾರಿ ಮಂಜುನಾಥ್ ತಿಪ್ಪಮ್ಮ, ಗೀತಾ, ಶ್ರೀಪತಿ, ಶರಣಮ್ಮ, ಆರೋಗ್ಯ ಸಿಬ್ಬಂದಿ. ಆರೋಗ್ಯ ಸಹಾಯಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು.
ಹೇಮೇಶ್ವರ, ಹೊನ್ನುರಸ್ವಾಮಿ, ಚೌಡಪ್ಪ, ಮಂಜುಳಾ, ಲಲಿತಾ, ದೊಡ್ಡಬಸಪ್ಪ, ಜೈತುನ ಬೀ,ಅರ್ಜುನ ಪ್ರದರ್ಶನ ನೀಡಿದರು. ಜಿಲ್ಲಾ ಸರ್ವೇಕ್ಷಣ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಹಾಗೂ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಮಾವಿನಹಳ್ಳಿ ಕಾರ್ಯದರ್ಶಿ ಕುರುಬರ ಹೇಮೇಶ್ವರ ತಂಡದ ಸಂಯುಕ್ತ ಆಶ್ರಯದಲ್ಲಿ ಬೀದಿ ನಾಟಕ ಪ್ರದರ್ಶನ ನಡೆಯಿತು.