ಆರೋಗ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ

ಧಾರವಾಡ,ಜೂ.18: ಇಂದಿನ ವೈಜ್ಞಾನಿಕಯುಗದಲ್ಲಿ ವೈದ್ಯರನ್ನುದೇವರೆಂದು ತಿಳಿದ ಜನರಿದ್ದಾರೆ. ಮಾನವೀಯತೆದೃಷ್ಟಿಯಿಂದಚಿಕಿತ್ಸೆ ನೀಡುವ ವೈದ್ಯರು ಈಗಲೂ ಇದ್ದಾರೆಎಂದು ನಗರದಖ್ಯಾತ ಹೃದಯರೋಗತಜ್ಞರಾದಡಾ. ಮಹಮ್ಮದಇಕ್ಭಾಲ ಶೇಖ ಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀಮತಿ ಅನ್ನಪೂರ್ಣಮ್ಮ ಸಿದ್ಧಲಿಂಗಶಾಸ್ತ್ರಿ ಹಿರೇಮಠದತ್ತಿಕಾರ್ಯಕ್ರಮ ಅಂಗವಾಗಿ ಕೊಡಮಾಡುವ ಆರೋಗ್ಯ ಸೇವಾರತ್ನ ಪ್ರಶಸ್ತಿ-2023' ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವೈದ್ಯಕೀಯಕ್ಷೇತ್ರತುಂಬ ಸಂಕೀರ್ಣವಾಗಿದ್ದು, ಯಾಂತ್ರಿಕೃತವಾಗಿದೆ.ಇಡೀಕ್ಷೇತ್ರ ವಾಣಿಜ್ಯಕರಣಗೊಂಡಿದೆ.ಆದರೆ.ಡಾ. ನಾಗಲೋಟಿಮಠ, ಡಾ.ಕರ್ಪೂರಮಠ, ಅಂಥ ವೈದ್ಯರು ನೀಡಿದ ಸಂಸ್ಕಾರದಿಂದ ಸಾಕಷ್ಟು ವೈದ್ಯರುಜೀವಪರವಾಗಿ ಸೇವೆ ಸಲ್ಲಿಸುತ್ತಿದ್ದಾರೆಎಂದರು. ಆರೋಗ್ಯ ಸೇವಾರತ್ನ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರೋಗ ಲಕ್ಷಣತಜ್ಞಡಾ.ಉಮೇಶ್ವರ ಹಳ್ಳಿಕೇರಿಯವರು ಕ್ಯಾನ್ಸರ ಸಾಧ್ಯತೆಗಳು, ಸವಾಲುಗಳು ಕುರಿತು ವಿವರಿಸಿದರು.ಅನೇಕ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ, ರಕ್ತ ಸಂಗ್ರಹಿಸುವ, ಅದನ್ನು ರೋಗಿಗಳಿಗೆ ಹಂಚಿಕೆ ಮಾಡುವಕಾರ್ಯದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿದರು.ಕ್ಯಾನ್ಸರ್ ಬರದ ಹಾಗೆ ಎಚ್ಚರ ವಹಿಸಬೇಕೆಂದರು.ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದುರಕ್ತದಾನ ಮಾಡುವಂತಾಗಬೇಕೆಂದರು. ಈ ಪ್ರಶಸ್ತಿಯು ನನ್ನಜವಾಬ್ದಾರಿಯನ್ನು ಹೆಚ್ಚಿಸಿದೆ. ಕ.ವಿ.ವ. ಸಂಘಕ್ಕೆ ನಾನು ಚಿರಋಣಿಎಂದರು.
ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಶಂಕರ ಹಲಗತ್ತಿ ಸ್ವಾಗತಿಸಿದರು.ಡಾ. ಸಂಜೀವಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಮಹೇಶ ಹೊರಕೇರಿ ಪ್ರಶಸ್ತಿ ಪತ್ರಓದಿದರು.ಪ್ರೊ.ಧನವಂತ ಹಾಜವಗೋಳ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.
ಕಾರ್ಯಕ್ರಮದಲ್ಲಿ, ಬಸವಪ್ರಭು ಹೊಸಕೇರಿ, ವೀರಣ್ಣಒಡ್ಡೀನ, ವಿಶ್ವೇಶ್ವರಿ ಬ. ಹಿರೇಮಠ, ಸುರೇಶ ಹೊರಕೇರಿ, ಸಿ.ಯು.ಬೆಳ್ಳಕ್ಕಿ, ಎಸ್.ಎಸ್.ಚಿಕ್ಕಮಠ, ಕೆ.ಎಚ್.ನಾಯಕ, ಎಸ್.ಕೆ.ಕುಂದರಗಿ, ಮಲ್ಲಾಪೂರಮಠ, ಸೇರಿದಂತೆ ಮುಂತಾದವರಿದ್ದರು.