ಆರೋಗ್ಯ ಸಿಬ್ಬಂದಿಗೆ‌ ಭಾನುವಾರ ರಜೆ ಕಡಿತದ ಸುಳಿವು ನೀಡಿದ ಸಿಎಂ

ತುಮಕೂರು, ಸೆ.25- ಆರೋಗ್ಯ ಇಳಾಖೆಯ ಸಿಬ್ವಂದಿ ಭಾನುವಾರ ಕೆಲಸ ನಿರ್ವಹಿಸಿ ಬೇರೆ ದಿವಸಗಳಲ್ಲಿ ಅವರಿಗೆ ರಜೆ ನೀಡುವ ಕುರಿತು ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ‌.ಬೊಮ್ಮಾಯಿ ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ಸಿಗಾರರೊಂದಿಗೆ ಮಾತನಾಡಿದ ಅವರು, ಭಾನುವಾರ ರಜೆ ಇರುವ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಬರುತ್ತಾರೆ. ಈ ವೇಳೆ ವೈದ್ಯರು ರಜೆಯಲ್ಲಿದ್ದರೆ ಅವರಿಗೆ ಚಿಕಿತ್ಸೆ ಸಿಗುವುದಿಲ್ಲ. ಆದ್ದರಿಂದ ರಜೆ ಬದಲಿಸುವ ಚಿಂತನೆ ನಡೆಸಲಾಗಿದೆ ಎಂದರು.
ಚಾಣಕ್ಯ ವಿವಿಗೆ ಜಮೀನು ನೀಡಿರುವುದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಎಷ್ಟು ಶಿಕ್ಷಣ ಸಂಸ್ಥೆಗಳಿಗೆ ಜಮೀನು ಕೊಟ್ಟಿದೆ ಎಂಬುದು‌ ಗೊತ್ತಿದೆ. ಬೇರೆಯವರು ಶಿಕ್ಷಣ ಸಂಸ್ಥೆ ಆರಂಭಿಸಿದರೆ ಜಮೀನು ನೀಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.