ದಾವಣಗೆರೆ.ಜೂ.24; ಯೋಗಾಸನ ದೈಹಿಕ ಆರೋಗ್ಯದ ಜತೆಯಲ್ಲಿ ಮಾನಸಿಕ ಜ್ಞಾನಾರ್ಚನೆ, ಖಿನ್ನತೆಯ ಮನಸ್ಸುಗಳ ಪರಿವರ್ತನೆಗಳಿಗೆ ಭದ್ರವಾದ ಬುನಾದಿ, ನಮ್ಮ ನಾಡು-ನುಡಿಯ ಸಂಸ್ಕಾರ, ಸಂಸ್ಕೃತಿ, ಸಭ್ಯತೆ, ಶಿಸ್ತು, ಸಮಯಪ್ರಜ್ಞೆ, ಇಚ್ಚಾಶಕ್ತಿ, ಕರ್ತವ್ಯ ಪ್ರಜ್ಞೆ ಈ ಎಲ್ಲಾ ಸಕಾರಾತ್ಮಕ ಚಿಂತನೆಗಳಿಗೆ ಯೋಗಾಸನ ಪೂರಕ ಎಂದು ಶ್ರೀ ಚೈತನ್ಯ ಸಂಚಾರಿ ಯೋಗ ಕೇಂದ್ರದ ಸಂಸ್ಥಾಪಕರು, ಹಿರಿಯ ಯೋಗ ಶಿಕ್ಷಕರಾದ ಬಿ.ಎಸ್.ನೀಲಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಿದ್ದವೀರಪ್ಪ ಬಡಾವಣೆ ಶಾಖೆಯ ವತಯಿಂದ 10 ದಿನಗಳ ಕಾಲ ಅಂತರಾಷ್ಟಿçÃಯ ಯೋಗ ದಿನಾಚರಣೆ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಾರ್ವಜನಿಕ ಉಚಿತ ಯೋಗ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು. ನಗರದ ಸಿದ್ಧವೀರಪ್ಪ ಬಡಾವಣೆಯ ಶ್ರೀ ಗಣೇಶ ನಿಲಯ ಸಭಾಂಗಣದಲ್ಲಿ ನಿನ್ನೆ ನಡೆದ ಈ ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಮಾತನಾಡಿ, ನಮ್ಮ ನಿಮ್ಮೆಲ್ಲರ ಜೀವನದಲ್ಲಿ ನಾವುಗಳು ಕೇವಲ ಹಣ ಗಳಿಕೆ ಆಸ್ತಿ, ಅಂತಸ್ತು, ಸಂಪಾದನೆಗಳಿಗೆ ಸೀಮಿತವಾಗದೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾಳಜಿಯೊಂದಿಗೆ ತೊಡಗಿಸಿಕೊಂಡರೆ ನಮ್ಮ ಜೀವನಕ್ಕೆ ಸಾರ್ಥಕತೆ ಬರುತ್ತದೆ. ಯೋಗ ಕೇವಲ ವಿಶ್ವದಿನಾಚರಣೆಗಷ್ಟೇ ಅಲ್ಲದೆ ದಿನಂಪ್ರತಿ ಅನುಸರಿಸಿದರೆ ಎಲ್ಲಾ ರೋಗಗಳಿಗೆ ದಿವ್ಯ ಔಷಧಿ ಅಂದರು.ಸಮಾರAಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್ ಮಾತನಾಡಿ, ನಮ್ಮ ದೇಹದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಯೋಗ. ಯೋಗದ ವಿವಿಧ ಆಸನಗಳಿವೆ ಅದನ್ನು ನಾವು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.ಕಲಾಕುAಚದ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, 10 ದಿನಗಳ ಕಾಲ ಯೋಗ ತರಬೇತಿ ನೀಡಿದ ಯೋಗ ಶಿಕ್ಷಕಿಯರಾದ ಶ್ರೀಮತಿ ಲೀಲಾ ಸುಭಾಷ್, ಸಂಧ್ಯಾ ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ, ಎಲ್ಲಾ ಅನಾರೋಗ್ಯದ ನಿವಾರಣೆಗೆ ಯೋಗಾಸನ ಸೂಕ್ತ ಮಾರ್ಗ ಈ ನಿಟ್ಟಿನಲ್ಲಿ ಕಲಾಕುಂಚದ ಈ ಸತ್ಕಾರ್ಯ ಶ್ಲಾಘನೀಯ ಎಂದರು.ನಿನ್ನೆಯ ದಿನ ಶ್ರೀಮತಿಯವರಾದ ಸುಜಾತ ರಾಘವೇಂದ್ರ, ಸುಮಿತ್ರ ಅನಂತರಾಮರಾವ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಮಮತಾ ಕೊಟ್ರೇಶ್ ಸ್ವಾಗತಿಸಿದರು. ಉಚಿತ ಯೋಗ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ಮಾತನಾಡಿ ಅಚ್ಚುಕಟ್ಟಾದ, ಶಿಸ್ತು ಬದ್ಧವಾದ ಈ ಶಿಬಿರದಿಂದ, ನಮ್ಮ ದೈಹಿಕ, ಮಾನಸಿಕ ಪರಿವರ್ತನೆಗೆ ನಾಂದಿಯಾಯಿತು ಎಂದು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊAಡರ. ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಕಲಾಕುಂಚದಿAದ ಸ್ಮರಣಿಕೆ ವಿತರಿಸಲಾಯಿತು, ಶ್ರೀಮತಿ ಸೌಮ್ಯ ಮಂಜುನಾಥ್ ಅರ್ಥಪೂರ್ಣವಾಗಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶ್ರೀಮತಿ ಸುಚಿತ್ರಾ ಗಣೇಶ್‌ರಾವ್ ವಂದಿಸಿದರು.