ಆರೋಗ್ಯ ಸಚಿವರಿಂದ ಡಾ.ಕೆ.ಶಿವರಾಜಗೆ ಪ್ರಶಸ್ತಿ ಪ್ರದಾನ

ಸಿಂಧನೂರು,ಜುಲೈ.೦೨-
ನಗರದ ಸಹನಾ ಮಕ್ಕಳ ಆಸ್ಪತ್ರೆಯ ಮಕ್ಕಳ ವೈದ್ಯರಾದ ಡಾ.ಕೆ. ಶಿವರಾಜ ಅವರಿಗೆ ರಾಜ್ಯ ಆರೋಗ್ಯ ಸಚಿವರು ರಾಜ್ಯ ಮಟ್ಟದ ಉತ್ತಮ ವೈದ್ಯ ಪ್ರಶಸ್ತಿ ನೀಡಿ ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಿದರು.
ಕರ್ನಾಟಕ ರಾಜ್ಯ ಬಾರತೀಯ ವೈದ್ಯಕೀಯ ಸಂಘ ನೀಡುವ ರಾಜ್ಯ ಮಟ್ಟದ ಉತ್ತಮ ವೈದ್ಯ ಪ್ರಶಸ್ತಿಗೆ ಸಹನಾ ಮಕ್ಕಳ ಆಸ್ಪತ್ರೆಯ ವೈದ್ಯರಾದ ಡಾ.ಕೆ. ಶಿವರಾಜ ಆಯ್ಕೆಯಾಗಿದ್ದು ಅದು ಕಲ್ಯಾಣ ಕರ್ನಾಟಕ ಭಾಗದಿಂದ ಇವರೊಬ್ಬರೆ ಆಯ್ಕೆಯಾಗಿದ್ದು ವಿಶೇಷ ರಾಜ್ಯಮಟ್ಟದ ಪ್ರಶಸ್ತಿ ಪಡೆಯುವ ಮೂಲಕ ಅವರು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.
ಮಕ್ಕಳ ತಜ್ಞರಾದ ಡಾ.ಕೆ.ಶಿವರಾಜಯವರ ವೈದ್ಯಕೀಯ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ವೈದ್ಯಕೀಯ ಸಂಘ ರಾಜ್ಯ ಮಟ್ಟದ ಉತ್ತಮ ವೈದ್ಯ ಪ್ರಶಸ್ತಿಗೆ ಆಯ್ಕೆಮಾಡಿದ್ದು ಬೆಂಗಳೂರಿನ ವೈದ್ಯ ಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಡಾ,ಬಸವ ರಾಜೇಂದ್ರ ಸಭಾಂಗಣದಲ್ಲಿ ನಡೆದ ವೈದ್ಯರ ದಿನಾಚರಣೆಯ ಸಮಾರಂಭದಲ್ಲಿ ರಾಜ್ಯ ಆರೋಗ್ಯ ಮತ್ತುಕುಟಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ ಗೂಂಡುರಾವ್ ಡಾ.ಕೆ, ಶಿವರಾಜ ಯವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಿದರು.
ಸಚಿವರಿಂದ ಪ್ರಶಸ್ತಿ ಸ್ವೀಕರಿಸಿದ ಡಾ.ಕೆ. ಶಿವರಾಜ ಜಿಲ್ಲೆಯ ಜನರ ಬಹುದಿನಗಳ ಕನಸು ಏಮ್ಸ್ ಮಂಜೂರ ಮಾಡುವಂತೆ ನಿರಂತರ ವಾಗಿ ಹೋರಾಟ ನಡೆದಿದ್ದು ಜಿಲ್ಲೆಗೆ ಏಮ್ಸ್ ಮಂಜೂರ ಮಾಡುವಂತೆ ಮನವಿ ಮಾಡಿಕೊಂಡಾಗ ಆರೋಗ್ಯ ಸಚಿವರಾದ ದಿನೇಶ ಗೂಂಡುರಾವ್ ಉತ್ತಮ ಸ್ಪಂದನೆ ನೀಡಿದರು ಎಂದು ರಾಜ್ಯ ಮಟ್ಟದ ಉತ್ತಮ ವೈದ್ಯ ಪ್ರಶಸ್ತಿ ಪಡೆದ ಡಾ ಕೆ.ಶಿವರಾಜ ಪತ್ರಿಕೆಗೆ ತಿಳಿಸಿದರು.