ಆರೋಗ್ಯ ಸಂಪತ್ತು ಮುಖ್ಯ: ನವಲಗುಂದಮಠ


ಹುಬ್ಬಳ್ಳಿ,ಮಾ.28: ಭಾರತೀಯ ಜನತಾ ಪಕ್ಷ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಹಾಗೂ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ಯುವಮೋರ್ಚಾ ವತಿಯಿಂದ ಹು-ಧಾ ಪೂರ್ವ ಯುವ ಮೋರ್ಚಾ ಅಧ್ಯಕ್ಷ ಪ್ರೀತಮ್ ಅರಕೇರಿ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯ ಮಂಟೂರ ರೋಡ್ ಕಲ್ಬುರ್ಗಿ ಮಠ ಸ್ಮಶಾನದಲ್ಲಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ “ಸ್ವಚ್ಛ ಸಂಡೇ” ಪ್ಲಾಸ್ಟಿಕ್ ಮುಕ್ತ ನಗರ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಹು-ಧಾ ಪೂರ್ವ ಮಂಡಲ ಅಧ್ಯಕ್ಷರಾದ ಪ್ರಭು ನವಲಗುಂದಮಠ ಮಾತನಾಡಿ ನಮ್ಮ ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಸಾಕಷ್ಟು ತೊಂದರೆ ಕಂಡು ಬರುತ್ತಿದೆ. ಜತೆಗೆ ಆರೋಗ್ಯವೆ ಭಾಗ್ಯ ಎಂಬಂತೆ ನಮ್ಮ ಆರೋಗ್ಯ ಸುತ್ತಲಿನ ಸ್ವಚ್ಛ ಪರಿಸರ ಅವಲಂಬಿಸಿದೆ. ಆದ್ದರಿಂದ ನಮ್ಮ ಪರಿಸರದ ಬಗ್ಗೆ ನಾವು ತುಂಬಾ ಕಾಳಜಿ ವಹಿಸುವುದು ಮುಖ್ಯ ಎಲ್ಲಸಂಪತ್ತಿಗಿಂತ ಆರೋಗ್ಯ ಸಂಪತ್ತೆ ನಮಗೆ ಅವಶ್ಯವಾಗಿದೆ ಎಂದರು.*
ಈ ಸಂಧರ್ಭದಲ್ಲಿ ಚವ್ಹಾಣ, ಚಂದ್ರಶೇಖರ ಗೋಕಾಕ್, ರಂಗಾ ಬದ್ದಿ, ಅನೂಪ ಬಿಜವಾಡ, ವಿನಯ ಸಜ್ಜನವರ, ಮಂಡಲ ಯುವ ಮೋರ್ಚಾ ಅಧ್ಯಕ್ಷರು ಪ್ರೀತಮ್ ಅರಕೇರಿ ಜಿಲ್ಲಾ ಯುವ ಮೋರ್ಚಾ ಪ್ರಧಾನಕಾರ್ಯದರ್ಶಿ ಶಿವಯ್ಯ ಹಿರೇಮಠ, ಸ್ವಚ್ಛಭಾರತ ಸಂಚಾಲಕರು ವಿನೋದ್ ಅಲಾಡಿ, ಜಿಲ್ಲಾ ಉಪಾಧ್ಯಕ್ಷರು ಜಗನ್ನಾಥ ಪವಾರ, ಹು-ಧಾ ಪೂರ್ವ ಯುವ ಮೋರ್ಚಾ ಪ್ರಧಾನಕಾರ್ಯದರ್ಶಿಗಳಾದ ಮಂಜು ಕಲಾಲ್, ಪ್ರಿನ್ಸ್ ಶರ್ಮ, ಮಿಥುನ ಚವ್ಹಾಣ, ಹರೀಶ ಹಳ್ಳಿಕೇರಿ, ಹರೀಶ್ ಸರವಳೇ, ಅಮೃತ ದಾಮೋದರ್, ಪ್ರವೀಣ್ ಕುಬಸದ, ಪ್ರವೀಣ್ ಗೌಡ ಪಾಟೀಲ, ಸೋಹನ್ ಕಟಗಿ, ಹು-ಧಾ ಪೂರ್ವ ವಕ್ತಾರ ಲಕ್ಷ್ಮಿಕಾಂತ ಘೋಡಕೆ, ಸಿದ್ದು ಉಣಕಲ, ಹಾಗೂ ಅನೇಕ ಯುವಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.