ಆರೋಗ್ಯ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಿ – ತಿಪ್ಪರಾಜು ಹವಲ್ದಾರ್

ಮಾನ್ವಿ.ಸೆ.೧೯-ಪ್ರಾಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ನದಿನದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಂಡ ಆರೋಗ್ಯ ಶಿಬಿರವನ್ನು ಸದುಪಯೋಗ ಪಡೆಸಿಕೊಳ್ಳಿ ಮಾಜಿ ಶಾಸಕ ತಿಪ್ಪರಾಜ ಹವಲ್ದಾರ್ ಹೇಳಿದರು.
ರಾಯಚೂರು ಗ್ರಾಮೀಣ ಕ್ಷೇತ್ರದ ಸೀಕಲ್ ಗ್ರಾಮದಲ್ಲಿ ಹಮ್ಮಿಕೊಂಡ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಜನರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಕ್ಷೇತ್ರದ ಅಧ್ಯಕ್ಷ ಶಂಕರಗೌಡ, ಮುಖಂಡರಾದ ಜಗದೀಶ ವಕೀಲರು.ಪ್ರಕಾಶ ವಕೀಲರು, ಶಾಂತಪ್ಪ ಕಪಗಲ್,ಗಜೇಂದ್ರ ಗೋರ್ಕಲ್,ಮೌನೇಶ ರಾಠೋಡ್,ಈಶಪ್ಪ ಬೈಲ್ ಮರ್ಚೇಡ್,ಮಹಾಂತೇಶ ಮುಕ್ತಿ,ಈರಪ್ಪ ಸಿಂಗನೋಡಿ,ಹನುಮಂತ ಸೀಕಲ್,ಮಲ್ಲೇಶ ನಾಯಕ ಜೂಕೂರು,ಮಹಾಂತೇಶ ರಾಜಲಬಂಡಾ ಸೇರಿದಂತೆ ಇತರರು ಉಪಸ್ಥಿತರಿದ್ದರು.