ಆರೋಗ್ಯ ವ್ಯವಸ್ಥೆ ಬಲವರ್ಧನೆಗೆ ಎಸ್‍ಯುಸಿಐ(ಸಿ) ಆಗ್ರಹ

ಕಲಬುರಗಿ ಮೇ 1: ಹೆಚ್ಚುತ್ತಿರುವ ಕೋವಿಡ್ ರೋಗಿಗಳ ಚಿಕಿತ್ಸೆಗೆ ಬೇಕಾದಷ್ಟು ಆಂಬುಲೆನ್ಸ್, ಹಾಸಿಗೆ, ಆಮ್ಲಜನಕ, ವೆಂಟಿಲೇಟರ್,ಐಸಿಯುಗಳನ್ನು ಸಮರೋಪಾದಿಯಲ್ಲಿ ಒದಗಿಸಿ. ಅಗತ್ಯ ಔಷಧಿಗಳ ಸುಗಮ ಪೂರೈಕೆಗೆ ಕ್ರಮ ಕೈಗೊಳ್ಳಿ. ಇತರಗಂಭೀರ ಕಾಯಿಲೆಗಳಿಗೆ ಚಿಕಿತ್ಸೆಯ ಲಭ್ಯತೆಯನ್ನು ಖಾತ್ರಿಪಡಿಸಿ. ವೈದ್ಯರು, ದಾದಿಯರು, ಪ್ರಯೋಗಾಲಯತಜ್ಞರು, ಡಿ ಗ್ರೂಪ್ ನೌಕರರ ಕೊರತೆಯನ್ನು ಸರಿಪಡಿಸಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ ಎಂದು ಎಸ್‍ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ಅವರು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ
ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಅಗತ್ಯವಿರುವಷ್ಟು ಮಾಸ್ಕ್, ಸಾನಿಟೈಸರ್, ಸುರಕ್ಷಾ ಕಿಟ್ ಗಳನ್ನು ಒದಗಿಸಿ. ಆಶಾ, ಅಂಗನವಾಡಿ, ಕಾರ್ಯಕರ್ತೆಯರಿಗೆ ಕೋವೀಡ್ ವಿಶೇಷ ಪೆÇ್ರೀತ್ಸಾಹ ಧನ ನೀಡಿ.ಕಠಿಣ ಲಾಕ್ ಡೌನ್ ನಿಬರ್ಂಧಗಳ ಸಂದರ್ಭದಲ್ಲಿ ಉದ್ಯೋಗ ನಾಶವನ್ನು ತಡೆಗಟ್ಟಿ. ಜೀವನೋಪಾಯ ಕಳೆದುಕೊಳ್ಳುವ ಸಣ್ಣ ವ್ಯಾಪಾರಿಗಳಿಗೆ ಮಾಸಿಕ 7500 ರೂ ಸಹಾಯಧನ ಒದಗಿಸಿ.ಬಡವರಿಗೆ ಪಡಿತರ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸಿ.ಎಲ್ಲರಿಗೂ ಸಾರ್ವತ್ರಿಕವಾಗಿ ಉಚಿತ ಲಸಿಕೆ ನೀಡಿ. ಅವಶ್ಯಕತೆ ಇರುವಷ್ಟು ಲಸಿಕೆ ಒದಗಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಎಂದು ಆಗ್ರಹಿಸಿದ್ದಾರೆ.