ಆರೋಗ್ಯ ವಿಮೆ ವಿತರಣೆ

ಮುಂಬೈ, ನ ೭- ಯಾವುದೇ ಸಮಸ್ಯೆಯಲ್ಲಿದೇ ನಿರಾಳವಾಗಿ ಆರೋಗ್ಯ ವಿಮೆ ಒದಗಿಸಲು ಇದೀಗ ಗೂಗಲ್‌ ಪೇ ಅನುವು ಮಾಡಿಕೊಟ್ಟಿದೆ.

ಭಾರತದ ಮುಂಚೂಣಿ ಜನರಲ್‌ ಇನ್ಶುರೆನ್ಸ್ ಸಂಸ್ಥೆಯಾದ ಎಸ್‌ಬಿಐ ಜನರಲ್, ಗೂಗಲ್ ಪೇ ದೊಂದಿಗೆ ತನ್ನತಾಂತ್ರಿಕ ಸಹಯೋಗವನ್ನು ಘೋಷಿಸಿ, ಬಳಕೆದಾರರು ಆರೋಗ್ಯ ವಿಮೆಯನ್ನು ಶೀಘ್ರವಾಗಿ  ಮತ್ತು ತೊಂದರೆಯಿಲ್ಲದೆ ಗೂಗಲ್ ಪೇ  ಆಪ್‌ನಲ್ಲಿ ಖರೀದಿಸಲು ಅನುವು ಮಾಡಿಕೊಟ್ಟಿದೆ. ಇದು, ಡಿಜಿಟಲ್ ವಾಹಿನಿಗಳ ಮೂಲಕ ಸಾಮಾನ್ಯ ವಿಮಾ ಪರಿಹಾರಗಳ ತನ್ನ ವಿತರಣೆಯನ್ನು ನಿರಂತರವಾಗಿ ವಿಸ್ತರಿಸಲಿದೆ.

ಇದು ಗೂಗಲ್ ಪೇದ ಪ್ರಪ್ರಥಮ ವಿಮಾ ಸಹಯೋಗವೂ ಆಗಿದ್ದು, ಗ್ರಾಹಕರಿಗೆ ಗೂಗಲ್ ಪೇ  ಸ್ಪಾಟ್‌ನಲ್ಲಿ ತಕ್ಷಣವೇ ಆರೋಗ್ಯ  ವಿಮೆ ಲಭ್ಯವಾಗುವಂತೆ ಮಾಡುತ್ತದೆ.  

ಆರೋಗ್ಯ ಸಂಜೀವನಿಯು, ಕೈಗೆಟುಕುವ ಪ್ರೀಮಿಯಮ್‌ಗಳಲ್ಲಿ  ಸಾಮಾನ್ಯಕವರೇಜ್‌ ಒದಗಿಸುವುದಕ್ಕಾಗಿ ಪರಿಚಯಿಸಲಾಗಿದ್ದ ಸಾಮಾನ್ಯಆರೋಗ್ಯ ವಿಮಾ ಪಾಲಿಸಿ ಆಗಿದ್ದು, ದೇಶದಲ್ಲಿಆರೋಗ್ಯ ವಿಮೆಯ ಸೇರ್ಪಡೆಯನ್ನು ಸುಧಾರಿಸಲು ನೆರವಾಗುತ್ತದೆ ಎಂದು ಎಸ್‌ಬಿಐ ಸಿಇಒ  ಪ್ರಕಾಶ್‌ಚಂದ್ರಕಂದ್ಪಾಲ್‌ ಅವರು ತಿಳಿಸಿದ್ದಾರೆ.