ಆರೋಗ್ಯ ರಕ್ಷಾ ವಿಮೆಗೆ  ನೋಂದಣಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.08: ತಾಲೂಕಿನ  ಆರೋಗ್ಯ ರಕ್ಷ  ನೊಂದಾಯಿತ 12000ಪಾಲುದಾರರಿಗೆ ಆರೋಗ್ಯ ರಕ್ಷಾ ಕಾರ್ಡ್ ವಿತರಣೆಗೆ  ಸಾಂಕೇತಿಕವಾಗಿ ರಾರಾವಿ ದಲ್ಲಿ ಯೋಜನೆಯ ಪಲಾನುಭವಿಗಳಿಗೆ ಆರೋಗ್ಯ ರಕ್ಷಾ  ಕಾರ್ಡ್ ನ್ನು ಆರೋಗ್ಯ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಮತ್ತು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಯಲ್ಲನ ಗೌಡ ವಿತರಿಸಿದರು.
ತಾಲೂಕಿನ ಯೋಜನಾಧಿಕಾರಿ ಸುಧೀರ್ ಹoಗಳೂರು ಮಾತನಾಡಿ ತಾಲೂಕಿನಲ್ಲಿ  ಯೋಜನೆಯ ಪಾಲುದಾರು ಕುಟುಂಬಗಳಿಗೆ ಆರೋಗ್ಯ ರಕ್ಷಣೆ ವಿಮೆ ನೋಂದಾಯಿಸಿದ್ದು ಈ ಕಾರ್ಯಕ್ರಮದಡಿ ನೊಂದಾಯಿತ  ಪಾಲುದಾರ ಅನಾರೋಗ್ಯ ಉಂಟಾಗಿ ಚಿಕಿತ್ಸೆ ಪಡೆದಲ್ಲಿ 20 ಸಾವಿರದವರೆಗೆ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.  
ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಮಾತನಾಡಿ ಆಧುನಿಕ ಜೀವನ ಪದ್ಧತಿಯಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಇಂತಹ ಕಾರ್ಯಕ್ರಮಗಳು ಕುಟುಂಬವನ್ನು ಸುಸ್ತಿರವಾಗಿ ನಡೆಸಿಕೊಂಡು ಹೋಗಲು ಸಹಕಾರಿಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.