ಆರೋಗ್ಯ ರಕ್ಷಣೆಗೆ ಪರಿಸರ ಸಂರಕ್ಷಣೆ ಮಾಡಿ:ಡಾ.ಇಂದಿರಾ ಉಪ್ಪಿನ

ಶಹಾಪುರ:ಮೇ.16:ಇಂದು ಗಿಡಮರ ಬಳ್ಳಿ ಸಂಕುಲ ನಾಶದಿಂದ ಶುದ್ದ ಗಾಳಿ ನೀರಿನ ಕೊರತೆಯಿಂದ ಪ್ರತಿಯೊಂದು ಜೀವ ರಾಶಿ ನರಳುತ್ತಿದ್ದು.ಮನೆ ಮನೆಂಗಳಗಳಲ್ಲಿ ಕೈತೊಟಗಳನ್ನು ಮಾಡಿಕೊಂಡು ಗಿಡಮರಗಳನ್ನು ಬೇಳಸಿದಲ್ಲಿ ಆರೋಗ್ಯ ರಕ್ಷಣೆಗೆ ಪೂರಕ ಶಕ್ತಿಯಾಗುತ್ತದೆ ಎಂದು ದಂತ ತಜ್ಞರಾದ ಡಾ, ಇಂದಿರಾ ಉಪ್ಪಿನರವರು ಕರೆ ನೀಡಿದರು. ಅವರು ತಮ್ಮ ಜನ್ಮದಿನದ ಅಂಗವಾಗಿ ಗಿಡ ನಡುವದರ ಮುಖಾಂತರ ಪರಸರ ಜಾಗ್ರತಿ ಸಂದೇಶ ನೀಡಿದರು. ಆಕ್ಷಿಜನ ಕೊರತೆಗಳಿಂದ ಮಾನವ ಕುಲಕೊಟಿ ವಿನಾಶದತ್ತ ಸಾಗುತ್ತಿದೆ. ಕೇವಲ ಮಾನವ ನಿರ್ಮಿತ ಆಮ್ಲಜನಕಕ್ಕೆ ಮಾರು ಹೋಗಿದ್ದು. ಶುದ್ದ ಗಾಳಿ ಬೇಳಕು ಕಾಣದೆ ಕಲುಷಿತ ವಾತವರಣಗಳ ಮಧ್ಯ ಬದುಕು ಮುನ್ನಡೆಯುತ್ತಿದೆ. ಅನಾಧಿಕಾಲಗಳಿಂದಲೂ ಬೇಳಸಿಕೊಂಡು ಉಳಿಸಿಕೊಂಡು ಬಂದ ಪರಸರ ಸಂಪತ್ತಿಗೆ ಕೊಡಲಿ ಪೆಟ್ಟು ನೀಡುತ್ತಿದ್ದು. ಈ ಅವ್ಯವಸ್ಥೆಗಳಿಂದ ಮಾನವನಿಗೆ ದೊರಕಬೇಕಾದ ಆಮ್ಲಜನಕ ಕಡಿಮೆಗೊಳ್ಳುತ್ತಿದೆ. ಆರೋಗ್ಯಕರ ಸಮಾಜ ನಿರ್ಮಾಣ ಮತ್ತು ಆರೋಗ್ಯಕರ ಕುಟುಂಬದ ಪ್ರಗತಿಗೆ ಗಿಡಮರ ಬಳ್ಳಿಗಳನ್ನು ಮನೆಗಳ ಸುತ್ತಮುತ್ತಲು ಬೇಳಸಿಕೊಂಡು ಶುದ್ದ ಆಕ್ಷಿಜನ ಪಡೆಯಬೇಕು. ಎಂದು ಅವರು ಕರೆ ನಿಡಿದರು. ಈ ಸಮಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಾದ ದುರ್ಗಣ್ಣ ಮತ್ತು ಸಿದ್ದಣ್ಣ ಮತ್ತು ಸರ್ಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ,ಜಗದೀಶ ಉಪ್ಪಿನ ಸೇರಿದಂತೆ ಇನ್ನತ್ತರರು ಹಾಜರಿದ್ದರು.