ಆರೋಗ್ಯ ಮೇಳ

ಗುರುಮಠಕಲ್:ಸೆ.20: ತಾಲೂಕು ಸಮಿಪದಲ್ಲಿರುವ ಮಿನಸಪೂರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ 2022. ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಆರೋಗ್ಯ ಮೇಳವು ಪ್ರಾಥಮಿಕ ಆರೋಗ್ಯ ಕೇಂದ್ರ ಕೊಂಕಲ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಮಿನಸಪೂರ ಗ್ರಾಮದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾದ ಮಲ್ಲರೆಡ್ಡಿ ಮಿನಸಪುರ ಅವರು ಉದ್ಘಾಟಿಸಿದರು.ಗ್ರಾಮಸ್ಥರು ಇದರ ಸದುಪಯೋಗ ವನ್ನು ಪಡೆದು ಕೊಂಡರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾಕ್ಟರ್ ಉದಯಕುಮಾರ. ಸಮುದಾಯ ಆರೋಗ್ಯ ಅಧಿಕಾರಿಗಳು ನಾಗರಾಜ. ಚೇತನ್. ಇಮಾನ್ಯವೆಲ್. ಮತ್ತು ಆರೋಗ್ಯ ನಿರಿಕ್ಷಣಾಧಿಕಾರಿಗಳಾದ ಹಣಮಂತರಾಯ.ಅಪ್ಪುಗೌಡ. ಸಾಬಣ್ಣ. ವಿಜಯಕುಮಾರ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರಾದ ಹಣ್ಮಂತಪ್ಪ. ಸಿದ್ದು. ಶ್ರೀ ಮತಿ ಅಂಜಮ್ಮ ಮತ್ತುಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಸಾರ್ವಜನಿಕರು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಿದರು.