ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ

ಬೀದರ್ :ಆ.21:ದಕ್ಷಿಣ ಕ್ಷೇತ್ರದ ಸಿರಕಟನಳ್ಳಿ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ್, ಇಂಜಿನಿಯರಿಂಗ್ ವಿಭಾಗ ಕಲ್ಬುರ್ಗಿ ವತಿಯಿಂದ ನಡೆದ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರು ಚಾಲನೆ ನೀಡಿ ಕಟ್ಟಡ ನಿರ್ಮಾಣ ಕಾರ್ಯ ಉತ್ತಮವಾಗಿ ಮಾಡುವಂತೆ ಸೂಚಿಸಿದರು.

ಬಳಿಕ ಮಾತನಾಡಿದ ಅವರು, ?47 ಲಕ್ಷ ವೆಚ್ಚದಲ್ಲಿ ಸಸುಜ್ಜಿತ ವೈದ್ಯಕೀಯ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಕಾಮಗಾರಿ ಆರಂಭಿಸಲಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಎಂದು ತಿಳಿಸಿದರು.

ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಜನಪ್ರತಿನಿಧಿಗಳು ಕಾಮಗಾರಿಯನ್ನು ಆಗಿಂದ್ದಾಗಿ ಪರಿಶೀಲಿಸಿ ಅನುಪಾಲನೆ ಮಾಡಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರು ಒಟ್ಟಾಗಿ ಕೆಲಸ ಮಾಡುವ ಮೂಲಕ ವೈದ್ಯಕೀಯ ಆಸ್ಪತ್ರೆಯ ನಿರ್ಮಾಣಕ್ಕೆ ಸಹಕರಿಸಬೇಕು.

ಸಿರಕಟನಳ್ಳಿ ಗ್ರಾಮದಲ್ಲಿ ಹಲವಾರು ಕುಟುಂಬಗಳು ಚಿಕಿತ್ಸೆಗಾಗಿ ಮನ್ನಾಏಖೇಳ್ಳಿ ಅಥವಾ ಬೀದರ್ ಆಸ್ಪತ್ರೆಗೆ ಅವಲಂಬಿಸಿದ್ದಾರೆ ಇದೀಗ ಗ್ರಾಮಸ್ಥರ ಸತತ ಪ್ರಯತ್ನ ಮಾಡಿದ್ದರ ಫಲವಾಗಿ ಗ್ರಾಮಕ್ಕೆ ನೂತನ ವೈದ್ಯಕೀಯ ಆಸ್ಪತ್ರೆ ನಿರ್ಮಾಣ ಕಾಮಗಾರಿ ಮಂಜೂರಾತಿ ದೊರೆತಿದೆ ಎಂದು ತಿಳಿಸಿದರು. ಇದರಿಂದ ಸಿರಕಟನಳ್ಳಿ ಗ್ರಾಮದ ಜನರಿಗೆ ಅನುಕೂಲವಾಗುತ್ತದೆ. ವೈದ್ಯಕೀಯ ಸೇವೆ ತ್ವರಿತವಾಗಿ ದೊರೆಯುವಂತಾಗಲು ಉಪಯುಕ್ತವಾಗುತ್ತದೆ ಎಂದರು.

ಸಿರಕಟನಳ್ಳಿ ಗ್ರಾಮದಲ್ಲಿರುವ ಆಯುರ್ವೇದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆಯುಷ ಔಷಧಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಿದರು. ಬಳಿಕ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಟಿಎಚ್‍ಓ ಸಂಗಾರೆಡ್ಡಿ, ಗ್ರಾಪಂ ಪಿಡಿಒ ಶಶಿಕಲಾ, ವೈಧ್ಯರಾದ ಪ್ರಮೋದ ಖೇಣಿ, ಆಯುಷ ಇಲಾಖೆ ವೈಧ್ಯರಾದ ಚಂದ್ರಶೇಖರ್, ಗ್ರಾಮಪಂಚಾಯಿತಿ ಅಧ್ಯಕ್ಷರಾದ ಸರಸ್ವತಿ ಗುರುಲಿಂಗಪ್ಪ, ಉಪಾಧ್ಯಕ್ಷರಾದ ಪಾಂಡುರಂಗ ಕೋಳಿ, ಜಗನ್ನಾಥ ಪಾಟೀಲ, ಶಿವಕುಮಾರ ಸ್ವಾಮಿ, ಮಾಣಿಕಪ್ಪ ಖಾಶೆಂಪುರ, ನಾರಾಯಣರೆಡ್ಡಿ, ಪೀರಪ್ಪ ಹುಗಾರ, ವೀರಶೆಟ್ಟಿ ಚಟ್ಟನಳ್ಳಿ, ರಾಜು ವಡ್ಡಿ, ಮಲ್ಲಿಕಾರ್ಜುನ್ ಬುಸಾ, ಶರಣಪ್ಪ ಕುಂಬಾರ, ರಾಜಕುಮಾರ ತುಗಾಂವ, ಅನೀಲ್ ಹಿಂದೊಡ್ಡಿ, ಕಾಶಿನಾಥ ಗಂಗೆ, ಜಗನ್ನಾಥ ಕಮಲಪುರ ಮತ್ತಿತರಿದ್ದರು.