ಆರೋಗ್ಯ ಪ್ರತಿಯೊಬ್ಬ ನಾಗರಿಕನ ಹಕ್ಕು

ಹರಿಹರ. ಜು.10;  ಪ್ರಪಂಚದ ಎಲ್ಲಾ ದೇಶಗಳೂ ಲಸಿಕೆ ಪಡೆದು ಸದೃಢವಾಗಿದೆ ಭಾರತ ಮಾತ್ರ ಭಂಡ ರಾಜಿಕೀಯದಲ್ಲಿ ನೊಂದು ಹೋಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಮೆಹರ್ವಾಡೆ ಹೇಳಿದರು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹುಟ್ಟುಹಬ್ಬದ ನಿಮಿತ್ತ ಇಂದು ನಗರದ ವಿವಿಧೆಡೆ ಸಸಿಗಳನ್ನು ನೆಟ್ಟು ಮನೆ ಮನೆಗೆ ತೆರಳಿ ಲಸಿಕೆ ಎಲ್ಲರಿಗೂ ಸುಗಮವಾಗಿ ಸಿಗಬೇಕೆಂದು ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಿದರು.ಈ ವೇಳೆ ಮಾತನಾಡಿದ ಅವರುಮಹಾಮಾರಿ ವೈರಸ್ ನಿಂದ ಭಯಭೀತರಾಗಿದ್ದ ಪ್ರತಿಯೊಬ್ಬ ಪ್ರಜೆಗಳಿಗೂ ವೈರಸ್ ನಿರ್ಮೂಲನೆ ಲಸಿಕೆಯನ್ನು ಹಾಕಿಸಬೇಕು ಚುನಾವಣೆ ಬೂತ್ ಗಳ ಹಾಗೆ ಲಸಿಕೆ ಬೂತ್ ಸ್ಥಾಪಿಸಿ ಜನಸಾಮಾನ್ಯರಿಗೆ ಕಾಯಿಸದೆ ಪ್ರತಿಯೊಬ್ಬರಿಗೂ ದೊರಕುವಂತಾಗಲಿ ಜೂನ್ ತಿಂಗಳ ಅಂತ್ಯದೊಳಗೆ ಕರ್ನಾಟಕದ ಪ್ರತಿಯೊಬ್ಬ ನಾಗರಿಕನಿಗೂ ಮೊದಲ ಡೋಸ್ ಕೋವಿಂಡ ಲಸಿಕೆ ಸೆಪ್ಟೆಂಬರ್ ಅಂತ್ಯದೊಳಗೆ ಎರಡನೇ ಡೋಸ್ ಲಸಿಕೆ ನೀಡುವುದಕ್ಕೆ ಸರ್ಕಾರ ಚಿಂತನೆ ಮಾಡಬೇಕು ಎಂದರು 
ಈ ವೇಳೆ ಗೌರವಾಧ್ಯಕ್ಷ ನಾಗರಾಜ್ ಗೌಡ .ತಾಲ್ಲೂಕು ಅಧ್ಯಕ್ಷ ಬಾಲಸುಬ್ರಹ್ಮಣ್ಯ .ಪ್ರಧಾನ ಕಾರ್ಯದರ್ಶಿ ಬಿ ಕುಮಾರ್. ಕಾರ್ಯದರ್ಶಿ ಲಿಂಗರಾಜ .ಯಶವಂತ್. ಮನೀಷಾ. ಮಂಜುನಾಥ ಪೈ .ಹಾಗೂ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇದ್ದರು