ಆರೋಗ್ಯ ತುರ್ತು ಪರಿಸ್ಥಿತಿ ನಿವಾರಣೆಗೆ ಒತ್ತು: ಮಾಂಡವೀಯ

ನವದೆಹಲಿ, ಜ, 5-ಭಾರತದ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ ಆರೋಗ್ಯ ತುರ್ತುಸ್ಥಿತಿಗಳ ತಡೆಗಟ್ಟುವಿಕೆ ಮತ್ತು ಒನ್ ಹೆಲ್ತ್ ಸೇರಿ ಮತ್ತಿತತರ ವಿಷಯಗಳ ಮೇಲೆ ಕೇಂದ್ರೀಕರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಇಂದಿಲ್ಲಿ ಹೇಳಿದ್ದಾರೆ.

ಆರೋಗ್ಯ ಆದ್ಯತೆಗಳು – ಆರೋಗ್ಯ ತುರ್ತುಸ್ಥಿತಿಗಳ ತಡೆಗಟ್ಟುವಿಕೆ ಸನ್ನದ್ಧತೆ ಮತ್ತು ಪ್ರತಿಕ್ರಿಯೆಯ ಮೇಲೆ ಮತ್ತಷ್ಟು ಕೇಂದ್ರೀಕೃತವಾಗಿರುತ್ತವೆ” ಎಂದು ಹೇಳಿದ್ದಾರೆ.

ಭಾರತವನ್ನು ವಿಶ್ವದ ಫಾರ್ಮಸಿ ಎಂದು ಕರೆಯಲಾಗುತ್ತದೆ. ಭವಿಷ್ಯದ ಆರೋಗ್ಯ ತುರ್ತುಸ್ಥಿತಿ ನಿರ್ವಹಿಸಲು ಜಾಗತಿಕವಾಗಿ ಲಸಿಕೆಗಳು, ಔಷಧಗಳು ಮತ್ತು ರೋಗನಿರ್ಣಯದ ವಿತರಣೆಯ ಉತ್ಪಾದನೆ ಉತ್ತೇಜಿಸಲು ಕಾರ್ಯಸೂಚಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಒನ್ ಹೆಲ್ತ್ ವಿಧಾನ ಬಳಸಿಕೊಂಡು, ಉತ್ತಮ ಸಾರ್ವಜನಿಕ ಆರೋಗ್ಯ ಫಲಿತಾಂಶ ಸಾಧಿಸಲು ಸಾರ್ವಜನಿಕ ಆರೋಗ್ಯ, ಪ್ರಾಣಿ ಮತ್ತು ಪರಿಸರ ಆರೋಗ್ಯ ಕ್ಷೇತ್ರಗಳ ನಡುವಿನ ಅಂತರ-ವಲಯ ಸಹಯೋಗ ಸಾಧಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಕಣ್ಗಾವಲು ಕಾರ್ಯಕ್ರಮಗಳು, ನೀತಿಗಳು ಮತ್ತು ಸಂಶೋಧನೆಗಳನ್ನು ವಿನ್ಯಾಸಗೊಳಿಸಲು, ಕಾರ್ಯಗತಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಸಹಾಯ ಮಾಡಲಿವೆ ಎಂದು ಹೇಳಿದರು.

ಗ್ಲೋಬಲ್ ಹೆಲ್ತ್ ಆರ್ಕಿಟೆಕ್ಚರ್‌ಗಾಗಿ ಬಹು ವೇದಿಕೆಗಳಲ್ಲಿ ಚರ್ಚೆಗಳನ್ನು ಒಮ್ಮುಖಗೊಳಿಸುವಲ್ಲಿ ಭಾರತದ ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದಾರೆ.

ಬಹುಪಕ್ಷೀಯ ಜಾಗತಿಕ ಆರೋಗ್ಯ ವೇದಿಕೆಗಳಲ್ಲಿ ಮಾತುಕತೆಗಳಲ್ಲಿ ಜಾಗತಿಕತೆಯನ್ನು ಪ್ರತಿನಿಧಿಸುವಲ್ಲಿ ಭಾರತ ಪೂರ್ವಭಾವಿ ಪಾತ್ರವನ್ನು ವಹಿಸುವ ಗುರಿಯನ್ನು ಹೊಂದಿದೆ ಹೊಂದಿದೆ ಎಂದರು.

ಶಾಶ್ವತ ವೈದ್ಯಕೀಯ ಪ್ರತಿಮಾಪನ ವೇದಿಕೆಯನ್ನು ರಚಿಸುವ ಮೂಲಕ ಔಷಧೀಯ ವಲಯದಲ್ಲಿ ಸಹಕಾರವನ್ನು ಬಲಪಡಿಸಲು ಸಾದ್ಯವಾಗಲಿದೆ ಎಂದಿದ್ದಾರೆ. .

ಶಾಶ್ವತ ವೈದ್ಯಕೀಯ ಪ್ರತಿಮಾಪನ ವೇದಿಕೆ ರಚಿಸುವ ಮೂಲಕ ಮತ್ತು ಸುರಕ್ಷಿತ, ಗುಣಮಟ್ಟದ ಮತ್ತು ಕೈಗೆಟುಕುವ ರೋಗನಿರ್ಣಯದ ಲಸಿಕೆಗಳು ಮತ್ತು ಚಿಕಿತ್ಸಕಗಳ ಲಭ್ಯತೆಯನ್ನು ಖಾತ್ರಿಪಡಿಸುವ ಮೂಲಕ ಔಷಧೀಯ ವಲಯದಲ್ಲಿ ಸಹಕಾರವನ್ನು ಬಲಪಡಿಸಲು ಒತ್ತು ನೀಡಲಾಗುವುದು ಎಂದು ಹೇಳಿದ್ದಾರೆ.