
ಕಲಬುರಗಿ:ಸೆ.14:ಅಮರಕಲಾ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಸಂಘ ಹಾಗೂ ಪ್ರೈಮ್ 5ಜ ಸರ್ದಾರ ವಲ್ಲಭಭಾಯ ಪಟೇಲ ಸೊಸೈಟಿ, ಕಾಮದೇನು ಸ್ವಾಸ್ಥ್ಯ ಕೇಂದ್ರದವರ ಸಹಯೋಗದೊಂದಿಗೆ ದಿನಾಂಕ 15 -9 -2023 ರಂದು ಬೆಳಿಗ್ಗೆ 9.30 ಗಂಟೆಗೆ ಕಲಬುರಗಿ ನಗರದ ರಾಜಾಪುರ ಬಡಾವಣೆಯ ಪ್ರಶಾಂತ ನಗರದಲ್ಲಿರುವ ಅಮರಕಲಾ ಸ್ಟುಡಿಯೋ ಮತ್ತು ಇವೆಂಟ್ ಮ್ಯಾನೇಜ್ಮೆಂಟ್ ಸಭಾಂಗಣದಲ್ಲಿ “ಆರೋಗ್ಯದ ಅರಿವು ಮತ್ತು ಜಾಗೃತಿ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಟನೆಯನ್ನು ಖ್ಯಾತ ಮನೋವೈದ್ಯರಾದ ಡಾ. ಅಮೂಲ ಪತಂಗೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಖ್ಯಾತ ವೈದ್ಯರದ ಡಾ. ಬಾಲಕೃಷ್ಣ ರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮಾಜಿ ಅಧ್ಯಕ್ಷರಾದ ವೀರಭದ್ರ ಸಿಂಪಿ, ಜನಪರ ಹೋರಾಟಗಾರ, ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ, ರಮೇಶ ಬಾಬು, ಪ್ರಸಾದ ಎ ತಿಗಡಿಕರ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಅಮರಪ್ರಿಯ ಹಿರೇಮಠ ವಹಿಸಲಿದ್ದಾರೆ. ಬೆಂಗಳೂರು ಹಾಗೂ ಕಲ್ಬುರ್ಗಿಯ ಖ್ಯಾತ ವೈದ್ಯರಿಂದ ಭಾರತೀಯ ಸಾಂಪ್ರದಾಯಿಕ ಚಿಕಿತ್ಸೆ ಪದ್ಧತಿ ಫಾರ್ಮ್ ರಿಪ್ಲೆಕ್ಸ್ ಲಜಿ ಗಿಡಮೂಲಿಕೆಗಳ ಔಷಧಿ ಚಿಕಿತ್ಸೆ ನಡೆಯಲಿದೆ ಅದಕ್ಕಾಗಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅಮರಕಲಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಅಮರಪ್ರಿಯ ಹಿರೇಮಠ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.