ಆರೋಗ್ಯ ತಪಾಸಣೆ ಶಿಬಿರ


ಸಂಜೆವಾಣಿ ವಾರ್ತೆ
ಕೊಟ್ಟೂರು:
ಕೊಟ್ಟೂರು ಪಟ್ಟಣದ ಹ್ಯಾಳ್ಯಾ ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ಮಾನ್ ಭಾರತ್ ಮತ್ತು ಕರ್ನಾಟಕ ಆರೋಗ್ಯದ ಸೇವೆಯನ್ನು ಒದಗಿಸುವ ಸಂಯೋಜಿತ ಯೋಜನೆ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಮಲ್ಲನಾಯಕನಹಳ್ಳಿ ಹಾಗೂ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಕೊಟ್ಟೂರು ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ ಅಡಿಯಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು
ಈ ಶಿಬಿರವನ್ನು ಗ್ರಾಮ ಪಂಚಾಯತಿ ಅಧ್ಯಕ್ಷರ ಮತ್ತು ಸದಸ್ಯರ ಆರೋಗ್ಯವನ್ನು ತಪಾಸಣೆ ಮಾಡುವುದರ ಮೂಲಕ ಚಾಲನೆಯನ್ನು ನೀಡಲಾಯಿತು.
ಸಾರ್ವಜನಿಕರಿಗೆ ಜ್ವರ, ನೆಗಡಿ, ಕೆಮ್ಮು, ರಕ್ತದ ಒತ್ತಡ, ರಕ್ತದ ಪರೀಕ್ಷೆ ಇನ್ನು ಮುಂತಾದ ರೋಗಗಳ ಪರೀಕ್ಷೆಯನ್ನು ಮಾಡಲಾಯಿತು.
ಸಾರ್ವಜನಿಕರಿಗೆ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ವೈದ್ಯರನ್ನು ಸಂಪರ್ಕಿಸುವ ಹಂತಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಮಹಿಳಾ ಪೋಷಣಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ತಮ್ಮ ಆರೋಗ್ಯದ ಬಗ್ಗೆ ಒಲವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯಧಿಕಾರಿಯಾದ ನಾಗಲಾಂಬಿಕೆ, ನಾಗರಾಜ್ ಮಂಜುಳಾ, ನಾಗವೇಣಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಘವೇಂದ್ರ, ಉಪಾಧ್ಯಕ್ಷರಾದ ಶಿಲ್ಪಾ ಸಿದ್ದೇಶ್, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾದ ಹೆಚ್.ಎಂ. ಗಂಗಾಧರ್, ಗ್ರಾಮ ಪಂಚಾಯತಿ ಗ್ರಂಥಾಲಯದ ಸಹಾಯಕರಾದ ಲೋಕೇಶ್, ಸದಸ್ಯರಾದ ಕೊಟ್ರೇಶ್, ವಸಂತ್ ಕುಮಾರ್, ಶಿಲ್ಪರಾಜು, ನಾಗೇಶ್, ನುಪ್ಪಣ್ಣ, ದೇವಲ್ಯಾನಾಯ್ಕ ಹಾಗೂ ಆಶಾ ಕಾರ್ಯಕರ್ತರು, ಇತರರು ಉಪಸ್ಥಿತರಿದ್ದರು.