ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಅ.13 :- ಮಳೆ ಕೈ ಕೊಟ್ಟು ಬರಗಾಲ ಮೂಡುತ್ತಿರುವ ಈ ಸಂದರ್ಭದಲ್ಲಿ ರೈತರ ಜೀವನ ಹಾಗೂ ಅವರ ಆರ್ಥಿಕ ಪರಿಸ್ಥಿತಿ ಸರಿಇರದೆ ಇದ್ದು ಆರೋಗ್ಯದ ಕಡೆ ಗಮನ ಹರಿಸದೆ ರೈತರು ಚಿಂತೆಗೆ ಒಳಗಾಗುತ್ತಿದ್ದೂ ಇಂತಹ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಜನರಿಗೆ ಬಹು ಉಪಯೋಗವಾಗಲಿವೆ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ನರಸಿಂಹನಗಿರಿ ಗ್ರಾಮದಲ್ಲಿ ತಮ್ಮ ತಂದೆ ಮಾಜಿ ಶಾಸಕ ಎನ್ ಟಿ ಬೊಮ್ಮಣ್ಣ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಿಮಿತ್ತ ತಮ್ಮ ನೇತೃತ್ವ ಹಾಗೂ ಸಹಕಾರದಲ್ಲಿ ಬೆಂಗಳೂರು ಸಪ್ತಗಿರಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಆಯೋಜಿಸಿದ ಹೃದಯರೋಗ, ನರರೋಗ, ಕ್ಯಾನ್ಸರ್ ಮೂತ್ರಪಿಂಡದ ಕಲ್ಲು ಖಾಯಿಲೆಗಳ ತಪಾಸಣಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ತಂದೆಯವರಾದ ಎನ್ ಟಿ ಬೊಮ್ಮಣ್ಣ ಅವರ ರಾಜಕೀಯ ಜೀವನ ಹಾಗೂ ಅವರ ಜನಪರ ಕಾಳಜಿ ಶೈಕ್ಷಣಿಕ ಪ್ರಗತಿ ಆರೋಗ್ಯದ ದೃಷ್ಟಿಕೋನ ಸೇರಿದಂತೆ ಇತರೆ ಅವರ ಆಶಯಗಳು ನನಗೆ ಇಂದಿನ ರಾಜಕೀಯ ಹೆಜ್ಜೆಗೆ ದಾರಿದೀಪವಾಗಿದ್ದು ಅವರ ಆಶಯದಂತೆ ಜನಪರ ಸೇವೆಯಲ್ಲಿ ತೊಡಗುವ ಮೂಲಕ ತಂದೆಯ ಪ್ರಥಮ ವರ್ಷದ ಪುಣ್ಯಸ್ಮರಣೆಯಲ್ಲಿ ಹಾಗೂ ತಾಲೂಕಿನಲ್ಲಿ ಬರಗಾಲದ ಈ ಸಂದರ್ಭದಲ್ಲಿ ಜನರ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ ನರಸಿಂಹಗಿರಿಯಲ್ಲಿ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ ಇದರ ಉಪಯೋಗ ಗ್ರಾಮೀಣ ಭಾಗದ ಸಾವಿರಾರು ಜನತೆಗೆ ಉಪಯೋಗವಾಗಲಿದೆ ಎಂದು ಶಾಸಕರು ತಿಳಿಸಿದರು.
ಕಾಂಗ್ರೆಸ್ ಮುಖಂಡ ಎನ್ ಟಿ ತಮ್ಮಣ್ಣ ಮಾತನಾಡಿ ತಂದೆ ಎನ್ ಟಿ ಬೊಮ್ಮಣ್ಣ ಅವರು ಶಾಸಕರಾದ ಸಂದರ್ಭದಲ್ಲಿ ಈ ಹಿಂದಿನ ಕೂಡ್ಲಿಗಿ ಕ್ಷೇತ್ರದಲ್ಲಿ ಬರುವ ಮೂಲೆಕಟ್ಟಿನ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಹೈಸ್ಕೂಲ್ ಗಳನ್ನು ತೆರೆದು ಮಕ್ಕಳ ಶಿಕ್ಷಣಕ್ಕೆ ದಾರಿದೀಪವಾದ ಇವರು ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿಯಲ್ಲಿ ಜನರ ಆರೋಗ್ಯ ದೃಷ್ಟಿಯಲ್ಲಿ ನೂರು ಹಾಸಿಗೆ ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಮೂಲಕ ಜನಪರ ಸೇವೆ ಹೆಚ್ಚಿಸಿಕೊಂಡಿದ್ದರು ಅವರ ಆದರ್ಶಗಳು ನಮಗೆಲ್ಲ ಮಾರ್ಗದರ್ಶನವಾಗಿದೆ ಇಂದು ನಮ್ಮ ಸಹೋದರ ಕೂಡ್ಲಿಗಿ ಶಾಸಕರಾಗಿದ್ದು ತಾನೊಬ್ಬ ನೇತ್ರ ತಜ್ಞನಾಗಿದ್ದು ಅಂಧರ ಬಾಳಿಗೆ ಬೆಳಕು ಚೆಲ್ಲುವ ಕಾರ್ಯಮಾಡುತ್ತಿದ್ದಾರೆ ಅಲ್ಲದೆ ಇತ್ತೀಚಿಗೆ ನಡೆದ ಅಧಿವೇಶನದಲ್ಲೂ ಕೂಡ್ಲಿಗಿ ಕ್ಷೇತ್ರದ ಬಗ್ಗೆ ಧ್ವನಿ ಎತ್ತಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮತ್ತು ಹಿಂದುಳಿದ ಕ್ಷೇತ್ರದ ಬಗ್ಗೆ ಹೆಚ್ಚಿನ ಅನುದಾನ ತರುವ ಪ್ರಯತ್ನ ಮಾಡಿದ್ದಾರೆ ತಂದೆಯ ಆಶಯದಂತೆ ಸಹೋದರ ಡಾ ಶ್ರೀನಿವಾಸ ಕ್ಷೇತ್ರದ ಅಭಿವೃದ್ಧಿ, ಶೈಕ್ಷಣಿಕ ಗುಣಮಟ್ಟ ಮತ್ತು ಆರೋಗ್ಯ ಕಡೆ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳ ಹೆಚ್ಚಿನ ಗಮನಹರಿಸುತ್ತರೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕರ ಪತ್ನಿ ಡಾ ಪುಷ್ಪ ಶ್ರೀನಿವಾಸ ಸೇರಿದಂತೆ ಶಾಸಕರ ಸಹೋದರಿಯರು ಹಾಗೂ ಸಂಬಂದಿಕರು ಜೊತೆಗಿದ್ದು ಕಾರ್ಯಕ್ರಮದ ನಂತರ ಎನ್ ಟಿ ಬೊಮ್ಮಣ್ಣ ಅವರ ಪುಣ್ಯಸ್ಮರಣೆ ಕಾರ್ಯದಲ್ಲಿ ತೊಡಗಿದ್ದರು.
ಮಹಿಳೆಯರು, ವಿಕಲಚೇತನರು ವೃದ್ಧರು ಸೇರಿದಂತೆ ಸಾವಿರಾರು ಜನತೆ ತಪಾಸಣಾ ಶಿಬಿರದ ಉಪಯೋಗ ಪಡೆದುಕೊಂಡರು.