ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ,ಅ9: ಕೆ ಎಲ್ ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯ ಹುಬ್ಬಳ್ಳಿ. ಕೆ ಎಲ್ ಇ ಆಸ್ಪತ್ರೆ ಗಬ್ಬೂರ್ ಹುಬ್ಬಳ್ಳಿ ಮತ್ತು ಕೆ ಎಲ್ ಇ – ಹುಬ್ಬಳ್ಳಿ ಕೋ- ಆಪರೇಟಿವ್ ಆಸ್ಪತ್ರೆ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಧಾರವಾಡ ಜಿಲ್ಲೆಯ ಅಂಚಟಗೇರಿ ಗ್ರಾಮದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಂಸ್ಥೆಯ ಅಧ್ಯಕ್ಷರಾದ ಶಂಕ್ರಣ್ಣ ಮುನವಳ್ಳಿ ಅವರು ಉದ್ಘಾಟಿಸಿದರು.
ಈ ಶಿಬಿರದಲ್ಲಿ ನೂರಾರು ಸಾರ್ವಜನಿಕರನ್ನು ತಪಾಸಣೆ ಮಾಡಿ ಉಚಿತ ಔಷಧವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೆ. ಎಲ್. ಇ ಕಾಲೇಜಿನ ಪ್ರಾಂಶುಪಾಲರಾದ ಡಾ ಎಮ್ ಜಿ ಹೀರೆಮಠ, ಅಂಚಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುನಾಥ ಗಾಂಡಗೇರ, ರಾಮಪ್ಪ ಬಡಿಗೇರ್, ಬಸವರಾಜ್ ಗಬ್ಬುರ್, ಡಾ ವಾಯ್. ಎಪ್. ಹಂಜಿ ಮತ್ತು ಸುತ್ತಮುತ್ತಲಿನ ಗ್ರಾಮದವರು ಉಪಸ್ಥಿತಿ ಇದ್ದರು.