ಆರೋಗ್ಯ ಜಾಗೃತಿ ಕಾರ್ಯಕ್ರಮ

ಸಂಜೆವಾಣಿ ವಾರ್ತೆಸಿರುಗುಪ್ಪ, ಡಿ.31: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಸರ್ಕಾರಿ ಆಸ್ಪತ್ರೆ ವತಿಯಿಂದನಗರದ ಅಂಬಾನಗರ ಜಾನಪದ‌ ತಂಡ ನೇತ್ರ ಕಲಾ ಸಂಘದಿಂದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಕುರಿತು ನಗರದ ಮತ್ತು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸಿದರು.ಕಲಾತಂಡದ ವತಿಯಿಂದ ಆರೋಗ್ಯ ರಾಷ್ಟ್ರೀಯ ಕಾರ್ಯಕ್ರಮಗಳಾದ ಕ್ಷಯರೋಗ, ಕುಷ್ಠರೋಗ, ಭ್ರೂಣಲಿಂಗ ಪತ್ತೆ, ಭ್ರೂಣ ಹತ್ಯೆ, ತಾಯಿ ಮಗುವಿನ ಆರೈಕೆ, ಬಾಲ್ಯ ವಿವಾಹ ನಿಷೇಧ, ಏಡ್ಸ್ ರೋಗ ತಡೆಗಟ್ಟುವಿಕೆ ಮುಂತಾದುವುಗಳ ಕುರಿತು ನಾಟಕ, ಹಾಡು, ಮತ್ತು ನೃತ್ಯ ರೂಪಕದ ಮೂಲಕ ಸರ್ವಜನಜಕರಿಗೆ ಆರೋಗ್ಯದ ಜಾಗೃತಿ ಸಾರಿದರು.ನಗರದ ಬಸ್ ನಿಲ್ದಾಣ ಮತ್ತು ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣ, ರಾರಾವಿ, ಪಪ್ಪನಾಳು, ಕರೂರು, ಶಾನವಾಸಪುರ, ಕೆ.ಬೆಳಗಲ್ಲು ಗ್ರಾಮಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳ ಮೂಲಕ ಆರೋಗ್ಯ ಜಾಗೃತಿಯನ್ನು ಮೂಡಿಸಲಾಯಿತು.ಕಲಾ ತಂಡದ ಸಂಚಾಲಕ ದಳವಾಯಿ ವೀರೇಶ ಮತ್ತು ಸಂಗಡಿಗರು, ಪೊಪ್ಪನಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತ್ ರೆಡ್ಡಿ, ಪ್ರಭಾರಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ,  ಆರೋಗ್ಯ ನಿರೀಕ್ಷಣಾಧಿಕಾರಿ  ಮಲ್ಲಿಕಾರ್ಜುನಪ್ಪ, ರಚೋಟಯ್ಯ, ಪಂಪಾಪತಿ, ಗ್ರಾಮ ಪಂಚಾಯಿತಿ ಸದಸ್ಯ ನೀರು ಗಂಟೆ ರಾಘವೇಂದ್ರ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಫಾತಿಮಾ, ಆಶಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮದ ನಾಗರಿಕರು ಇದ್ದರು.