
ಬೀದರ್:ಮೇ.13: ಆರೋಗ್ಯ ಸೇವೆಯ ಕ್ಷೇತ್ರದಲ್ಲಿ ವೈದ್ಯರ ಸೇವೆಗಿಂತ ದಾದಿಯರ (ನರ್ಸ್) ಸೇವೆ ಅನನ್ಯವಾಗಿದೆ ಎಂದು ಪ್ರಗತಿ ಆಸ್ಪತ್ರೆ ಮುಖ್ಯಸ್ಥ ಹಾಗೂ ವೈದ್ಯ ಡಾ. ಲೋಕೇಶ ಹೇಳಿದರು.
ಶುಕ್ರವಾರ ನಗರದ ಪ್ರಗತಿ ಆಸ್ಪತ್ರೆಯಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ನರ್ಸ್ ಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವನ್ನು ನಾವೆಲ್ಲರೂ ಅಂತರಾಷ್ಟ್ರೀಯ ನರ್ಸ್ ಗಳ ದಿನವಾಗಿ ಆಚರಿಸುತ್ತೆವೆ ನಾವೆಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೇಯಬೇಕು ಎಂದರು.
ಇತ್ತೀಚೆಹೆ ಕೊವೀಡ್ ಮಹಾಮಾರಿ ಸಂದರ್ಭದಲ್ಲಿ ದಾದಿಯರು (ನರ್ಸ್ ಗಳು) ದೇಶದ ಜನರ ಪ್ರಾಣ ಉಳಿಸುವಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂದ ಅವರು ನಾವೆಲ್ಲರೂ ಅವರ ಸೇವೆಯ ರುಣದಲ್ಲಿದೆವೆ ಎಂದು ಹೇಳಿದರು..
ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಸತ್ಯಜೀತ ಪ್ರಗತಿ ಆಸ್ಪತ್ರೆಯ ನರ್ಸ್ ಸಂಜುಕುಮಾರ ಸೇರಿದಂತೆ ಪ್ರಗತಿ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.