ಆರೋಗ್ಯ ಕ್ಷೇತ್ರಕ್ಕೆ 50 ಸಾವಿರ ಕೋಟಿ ಸಾಲ ಕೋವಿಡ್ ನಿಗ್ರಹಕ್ಕೆ ಆರ್‌ಬಿಐನಿಂದ ಭರಪೂರ ನೆರವು

ನವದೆಹಲಿ, ಮೇ.೫- ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಲಸಿಕೆ ಉತ್ಪಾದಕರು ಸೇರಿದಂತೆ ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯ ವೃದ್ದಿಗೆ ಸಾಲ ನೀಡಲು ಬ್ಯಾಂಕುಗಳಿಗೆ ೫೦ ಸಾವಿರ ಕೋಟಿ ರೂಪಾಯಿ ಹಣಕಾಸು ( ಲಿಕ್ವಿಡಿಟಿ) ಪೂರೈಕೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ.

ಮಾರ್ಚ್ ೨೦೨೨ ರವೆಗೆ ಕೋವಿಡ್ ಸಂಬಂಧಿಸಿದ ತುರ್ತು ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಸಾಲ ಸೌಲಭ್ಯವನ್ನು ಬ್ಯಾಂಕ್‌ಗಳು ಒದಗಿಸಲು ಅನುಕೂಲವಾಗುವಂತೆ ಅವುಗಳಿಗೆ ತಕ್ಷಣ ೫೦,೦೦೦ ಕೋಟಿ ರೂಪಾಯಿ ಲಿಕ್ವಿಡಿಟಿ ಒದಗಿಸಲು ಮುಂದಾಗಿರುವುದಾಗಿ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಲಸಿಕೆ ಉತ್ಪಾದಕರು, ವೈದ್ಯಕೀಯ ಉಪಕರಣಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವವರು, ಆಸ್ಪತ್ರೆಗಳು ಪ್ರಯೋಗಾಲಯಗಳು, ಆಕ್ಸಿಜನ್ ತಯಾರಕರು ವೆಂಟಿಲೇಟರ್ ಉತ್ಪಾದಕರು, ಸೇರಿದಂತೆ ಇನ್ನಿತರ ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಸಾಲ ಸೌಲಭ್ಯ ನೀಡಲು ಇಂತಹದೊಂದು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು

ದೇಶದಲ್ಲಿ ಕೊರೊನಾ ಲಸಿಕೆ ಮತ್ತು ಕೊರೋನಾ ವಿರುದ್ದದ ಹೋರಾಟಕ್ಕೆ ಕೇಂದ್ರ ಸರ್ಕಾರ ೩೫ ಸಾವಿರ ಕೋಟಿ ರೂಪಾಯಿ ಪ್ರಕಟಿಸಿದೆ .ಅದಕ್ಕೆ ಪೂರಕವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಲಸಿಕೆ ಉತ್ಪಾದಕರು ಸೇರಿದಂತೆ ಕೋವಿಡ್ ಹೋರಾಟಕ್ಕೆ ಅಗತ್ಯವಿರುವ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.

ಸಣ್ಣ ಹಣಕಾಸು ಬ್ಯಾಂಕ್ ಗಳಿಗೆ ಐದು ನೂರು ಕೋಟಿ ರೂಪಾಯಿ ವರೆಗೆ ಸಾಲ ಸೌಲಭ್ಯ ಒದಗಿಸಲು ಅನುವು ಮಾಡಿಕೊಳ್ಳಲಾಗಿದ್ದು ಇದು ೨೦೨೨ರ ಮಾರ್ಚ್ ೩೧ರವರೆಗೆ ಅನ್ವಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಸೂಕ್ಷ್ಮ ಸಣ್ಣ ಮತ್ತು ಅತಿಸಣ್ಣ ವಲಯದ ಹಣಕಾಸು ಬ್ಯಾಂಕುಗಳು ಸಾಲ ಸೌಲಭ್ಯ ನೀಡಲು ಸಹಕಾರಿಯಾಗುವಂತೆ ಆರ್ ಬಿಐ ಈ ಕ್ರಮ ಕೈಗೊಂಡಿದೆ ಇದು ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಕೊರೋನಾ ಸೋಂಕಿನ ಎರಡನೇ ಅಲೆಯಿಂದ ತೊಂದರೆಗೊಳಗಾದ ನಾಗರಿಕರು, ವ್ಯಾಪಾರ ಘಟಕಗಳು ಮತ್ತು ಸಂಸ್ಥೆಗಳಿಗೆ ನಿಯೋಜಿಸಲಾಗುವುದು ಎಂದು ಭರವಸೆ ನೀಡಿದ ಅವರು ಎಲ್ಲಿ ಕೊರೋನಾ ಸೋಂಕಿನಿಂದ ಆಗುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವದಾಗಿ ಅವರು ತಿಳಿಸಿದ್ದಾರೆ.

ಹವಾಮಾನ ಇಲಾಖೆಯ ಸಾಮಾನ್ಯ ಮುಂಗಾರು ಮುನ್ಸೂಚನೆಯು ೨೦೨೧-೨೨ರಲ್ಲಿ ಗ್ರಾಮೀಣ ಬೇಡಿಕೆ ಮತ್ತು ಒಟ್ಟಾರೆ ಉತ್ಪಾದನೆಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಆದರೆ, ಹಣದುಬ್ಬರ ಒತ್ತಡಗಳ ಮೇಲೆ ಕೊಂಚ ಪರಿಣಾಮವನ್ನು ಬೀರಲಿದೆ ಎಂದು? ಕಳವಳ ವ್ಯಕ್ತಪಡಿಸಿದರು.

ಸಾಮಾನ್ಯ ಮುಂಗಾರು ಆಹಾರದ ಬೆಲೆಯ ಒತ್ತಡವನ್ನು ಅದರಲ್ಲೂ ವಿಶೇಷವಾಗಿ ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳಲ್ಲಿ ಹೊಂದಲು ಸಹಾಯ ಮಾಡುತ್ತದೆ. ಏಪ್ರಿಲ್ ೨೦೨೧ರಲ್ಲಿಯೂ ಸಹ ವ್ಯಾಪಾರ ಆಮದು ಮತ್ತು ರಫ್ತುಗಳು ಒಳ್ಳೆ ಬೆಳವಣಿಗೆ ಕಂಡಿದೆ ಎಂದು ಅವರು ಹೇಳಿದರು.

ಕೋವಿಡ್ ಸಂಬಂಧಿಸಿದ ಮೂಲ ಸೌಕರ್ಯಕ್ಕೆ ೫೦ ಸಾವಿರ ಕೋಟಿ ರೂಪಾಯಿ

ಬ್ಯಾಂಕುಗಳಿಗೆ ಲಿಕ್ವಿಟಿಟಿ ಪೂರೈಸಲು ಮುಂದಾದ ಆರ್ ಬಿಐ

ಲಸಿಕೆ ಉತ್ಪಾದನೆ ಸೇರಿದಂತೆ ಇನ್ನಿತರ ಅಗತ್ಯ ವೈದ್ಯಕೀಯ ಕ್ಷೇತ್ರ ಬಲಪಡಿಸಲು ಈ ಘೋಷಣೆ

೨೦೨೨ರ ಮಾರ್ಚ್ ವರೆಗೆ ಅನ್ವಯವಾಗುವಂತೆ ಲಿಕ್ವಿಡಿಟಿ ಪ್ರಕಟ

ಸಣ್ಣ ಅತಿ ಸಣ್ಣ ಸೂಕ್ಷ್ಮ ಹಣಕಾಸು ಮಕ್ಕಳಿಗೂ ಕೂಡ ಸಾಲ ಸೌಲಭ್ಯ ನೀಡಲು ಅನುಕೂಲವಾಗುವಂತೆ ಕ್ರಮ

ಕ್ಲಾಸಿಗೆ ಉತ್ಪಾದನೆ ಸೇರಿದಂತೆ ಕೋವಿಡ್ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ಈಗಾಗಲೇ ೩೫ ಸಾವಿರ ಕೋಟಿ ರೂಪಾಯಿ ಪ್ರಕಟ

ಕೇಂದ್ರ ಸರ್ಕಾರದ ಯೋಜನೆಗೆ ಪೂರ್ವಕವಾಗಿ ಆರ್ ಬಿಐನಿಂದ ಹಲವು ಯೋಜನೆ.