ಆರೋಗ್ಯ : ಕಾಳಜಿ ವಹಿಸಿ ಸಿಎಂ ಮನವಿ

ಬೆಂಗಳೂರು,ಏ.೭- ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಎಲ್ಲರೂ ಆರೋಗ್ಯದ ಕಡೆಗೆ ಕಾಳಜಿವಹಿಸುವ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದಿಲ್ಲಿ ಹೇಳಿದ್ದಾರೆ.
ಕೊರೋನೊ ಸೋಂಕು ವಿರುದ್ಧ ದಿಟ್ಟತನದಿಂದ ಸೆಣೆಸುತ್ತ ಸೇವೆ ನೀಡುತ್ತಿರುವ ಆರೋಗ್ಯ ಕ್ಷೇತ್ರದ ಎಲ್ಲ ವೈದ್ಯರು, ನರ್ಸ್ ಗಳು , ಸಿಬ್ಬಂದಿಗಳಿಗೆ, ಲಸಿಕೆ ಕಂಡು ಹಿಡಿದ ನಮ್ಮ ವಿಜ್ಞಾನಿಗಳಿಗೆ ಗೌರವ ಸಲ್ಲಿಸೋಣ ಎಂದು ಎಂದು ಅವರು ತಿಳಿಸಿದ್ದಾರೆ.
ವಿಶ್ವ ಆರೋಗ್ಯ ದಿನದ ಅಂಗವಾಗಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಸಾಂಕ್ರಾಮಿಕ ರೋಗದ ಸಮಯದಲ್ಲಿ ಎಲ್ಲರೂ ಕಾಳಜಿ ವಹಿಸುವ ಜೊತೆಗೆ ಅಕ್ಕಪಕ್ಕದವರ ಕಾಳಜಿಯನ್ನು ಉಳಿಸೋಣ ಎಂದು ಅವರು ತಿಳಿಸಿದ್ದಾರೆ
ಆರೋಗ್ಯ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ವಹಿಸೋಣ, ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳೋಣ ಎಂದು ಅವರು ಮನವಿ ಮಾಡಿದ್ದಾರೆ