ಆರೋಗ್ಯ ಕಾಪಾಡಿಕೊಂಡು ಧೈರ್ಯವಾಗಿ ಪರೀಕ್ಷೆ ಎದುರಿಸಿ:ಬಸವರಾಜ ಕೌಲಗಿ

ವಿಜಯಪುರ,ಫೆ.26:ವರ್ಷದುದ್ದಕ್ಕೂ ಓದಿದ ವಿಷಯವನ್ನು ಕೇವಲ ಮೂರು ತಾಸಿನಲ್ಲಿ ಹೇಗೆ ನಿರೂಪಿಸುವುದು ಎಂಬ ಭಯ ಸಾಮಾನ್ಯವಾಗಿ ಬಹುತೇಕ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕಾಡುತ್ತದೆ. ಬೇಸಿಗೆಯ ಝಳದ ಜೊತೆ ಪರೀಕ್ಷೆಯ ತಲೆ ಬಿಸಿಯೂ ಏರುತ್ತದೆ. ಶಾಲಾ ಪರೀಕ್ಷೆ ಒಂದೇ ಮಕ್ಕಳ ಭವಿಷ್ಯ ನಿರ್ಧರಿಸಲಾರದು. ಇದು ಶಾಲಾ ಪರೀಕ್ಷೆಯೇ ಹೊರತು ಜೀವನ ಪರೀಕ್ಷೆ ಅಲ್ಲ. ಕಾರಣ ವಿದ್ಯಾರ್ಥಿಗಳು ದೈಹಿಕ ಮಾನಸಿಕವಾಗಿ ಕುಗ್ಗದೇ ಉತ್ಸಾಹದಿಂದ ಪರೀಕ್ಷೆಯನ್ನು ಎದುರಿಸಿ ಉತ್ಸವವನ್ನಾಗಿ ಆಚರಿಸಬೇಕು ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ ಬಸವರಾಜ ಕೌಲಗಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಜಯಪುರ ನಗರದ ಎಕ್ಸಲಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಯಿಷಾ ಮುನ್ನಾವರ ಎಸ್. ಬೇಪಾರಿ ಪರೀಕ್ಷೆ ಒತ್ತಡದಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಿರುವದು ಕಂಡು ಬಂದು, ಖುರೇಷಿ ಕಾಲನಿಯಲ್ಲಿರುವ ವಿದ್ಯಾರ್ಥಿನಿಯ ನಿವಾಸಕ್ಕೆ ತೆರಳಿ ವಿದ್ಯಾರ್ಥಿನಿಗೆ ಸಿಹಿ ತಿನಿಸು, ಬ್ರೆಡ್, ಹಣ್ಣು ಹಂಪಲ ನೀಡಿ ಶೀಘ್ರವಾಗಿ ಗುಣಮುಖವಾಗಲೆಂದು ಹಾರೈಸಿದರು.
‘ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಆರೋಗ್ಯ ಚೆನ್ನಾಗಿ ಇದ್ದರೆ ಶಾಲಾ ಪರೀಕ್ಷೆ ಅಷ್ಟೇ ಅಲ್ಲ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲಬಹುದು. ಮೊದಲು ಆರೋಗ್ಯ ನಂತರ ಶಿಕ್ಷಣ. ಆರೋಗ್ಯವೇ ಭಾಗ್ಯವೆಂಬ ಮಾತಿನಂತೆ ಮಕ್ಕಳು ಸೌಖ್ಯವಾಗಿದ್ದರೆ ಮಾತ್ರ ಯಾವುದೇ ಪರೀಕ್ಷೆಗಳನ್ನು ಎದುರಿಸಬಹುದು. ಬರೀ ಅಂಕಗಳನ್ನು ಗಳಿಸುವ ಭರಾಟೆಯಲ್ಲಿ ಮಕ್ಕಳು ತಮ್ಮ ಆರೋಗ್ಯವನ್ನು ಅಲಕ್ಷಿಸಬಾರದು ಎಂದರು.
ಮೂರು ತಾಸಿನ ಪರೀಕ್ಷೆಗಿಂತ ನೂರು ವರ್ಷದ ಬದುಕು ಮುಖ್ಯ ಹನ್ನೆರಡನೇ ವರ್ಗದ ಪರೀಕ್ಷೆ ಭಯ ಹತ್ತಿರವೂ ಸುಳಿಯದಂತೆ ಪಾಲಕರಾದಿಯಾಗಿ ಎಲ್ಲರೂ ನೋಡಿಕೊಳ್ಳೊಣ. ಯಾವುದಕ್ಕೂ ಚಿಂತೆ ಬೇಡ. ನಮ ್ಮಇಡೀ ತಂಡ ವಿದ್ಯಾರ್ಥಿನಿಯ ಜೊತೆಗೆಇರುತ್ತದೆ ಎಂದು ಪ್ರೀತಿ ತುಂಬಿದ ಭರವಸೆಯ ನುಡಿಗಳನ್ನಾಡಿ ವಿದ್ಯಾರ್ಥಿನಿಗೆ ಧೈರ್ಯ, ಉತ್ಸಾº Àತುಂಬಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್., ವಿದ್ಯಾರ್ಥಿನಿಯ ತಂದೆ ಸಾಧಿಕ ಬೇಪಾರಿ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷರ ಭರವಸೆ ಮತ್ತು ಪ್ರೀತಿಯ ನುಡಿಗೆ ಬೇಪಾರಿ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ.