ಆರೋಗ್ಯ ಕಾಪಾಡಲು ವೈದ್ಯ ವೃತ್ತಿ ಆಯ್ಕೆ – ಡಾ. ಸಾದಿಯಾ


ಸಂಜೆವಾಣಿ ವಾರ್ತೆ
ಸಂಡೂರು:ಜು: 2: ಜನರ ಆರೋಗ್ಯ ಕಾಪಾಡಲು ವೈದ್ಯ ವೃತ್ತಿ ಆಯ್ಕೆ ಮಾಡಿಕೊಂಡಿದ್ದೇವೆ, ಯಾವುದೇ ಸಮಯದಲ್ಲೂ ಕರೆ ಬಂದರೆ ಸೇವೆಗೆ ಸಿದ್ದರಾಗಿ ಅಂತಹ ಕುಟುಂಬದವರ ಸಹಕಾರದಿಂದ ಸೇವೆ ನೀಡುತ್ತೇವೆ ಎಂದು ಡಾ. ಸಾದಿಯ ತಿಳಿಸಿದರು.
ಅವರು ತಾಲೂಕಿನ ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಉದ್ದೇಶಿಸಿ ಮಾತನಾಡಿ ವೈದ್ಯರು ನಿರಂತರ ಸೇವೆಯನ್ನು ಮಾಡುವವರು ಅವರ ಸೇವೆಯನ್ನು ಗೌರವದಿಂದ ಸ್ವೀಕರಿಸಿದಾಗ ವೈದ್ಯರಿಗೆ ತಾನು ಮಾಡಿದ ಸೇವೆಯ ತೃಪ್ತಿ ಸಿಗುತ್ತದೆ, ಅದ್ದರಿಂದ ಸೇವೆ ಮೊದಲಗುಣವಾಗಬೇಕು ಎಂದರು.
ಕೇಂದ್ರದ ಆವರಣದಲ್ಲಿರುವ ಜನೌಷಧಿ ಕೇಂದ್ರದ ಸಹಕಾರದೊಂದಿಗೆ ವೈದ್ಯರಿಗೆ ಶುಭಾಶಯ ಕೋರಿ ಕೇಕ್ ಕತ್ತರಿಸಲು ಅನುವು ಮಾಡಿ ಕೊಟ್ಟರು, ಈ ಸಂದರ್ಭದಲ್ಲಿ ಜನೌಷಧಿ ಕೇಂದ್ರದ ಮಾಲೀಕರಾದ ಮೇಘನಾಥ್, ಪಾಲುದಾರರಾದ ಅಬ್ದುಲ್ ಸುಕೂರ್ ಅವರು ವೈದ್ಯರಿಗೆ ಸನ್ಮಾನ ಮಾಡಿದರು,
ಸನ್ಮಾನದ ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಡಾ.ಬಿದನ್ ಚಂದ್ರ ರಾಯ್ ಅವರು ಪಶ್ಚಿಮ ಬಂಗಾಳದ ಎರಡನೇ ಮುಖ್ಯ ಮಂತ್ರಿಯಾಗಿಯೂ ವೈದ್ಯ ವೃತ್ತಿ ಸಲ್ಲಿಸಿ ಜನಾನುರಾಗಿಯಾಗಿದ್ದ ಅವರ ಸ್ಮರಣೆಗಾಗಿ ಅವರ ಜನ್ಮ ದಿನವನ್ನು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತಿದೆ, ವೈದ್ಯರ ಸೇವೆ ನೆನೆದು ನಮ್ಮನ್ನು ರಕ್ಷಣೆಮಾಡುವ ಸಲುವಾಗಿ ಅವರಿಗೆ ಕೆಂಪು ಗುಲಾಬಿ ಹೂ ಕೊಟ್ಟು ಕೃತಜ್ಞತೆಗಳನ್ನು ಅರ್ಪಣೆ ಮಾಡಲು ಈ ದಿನವನ್ನು ಆಚರಿಸಿದ್ದೇವೆ ಎಲ್ಲರಿಗೂ ಶುಭವಾಗಲಿ ಎಂದು ತಿಳಿಸಿದರು,
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ಡಾ.ಗೋಪಾಲ್ ರಾವ್,ಡಾ.ರಜಿಯಾ ಬೇಗಂ, ಡಾ.ಅನುಷಾ, ಸೂಪರಿಂಟೆಂಡೆಂಟ್ ಹರ್ಷ,ಜನೌಷಧಿ ಶಶಿಕುಮಾರ್, ಪ್ರಶಾಂತ್ ಕುಮಾರ್, ಮಂಜುನಾಥ್, ಪ್ರಶಾಂತ್, ಶಶಿಧರ, ಹುಲಿಗೆಮ್ಮ, ಮಾಲಾ, ಮಾಲಾಶ್ರೀ, ಗೀತಾ, ರೋಜಾ, ಸಂಗೀತಾ, ಇಮ್ರಾನ್, ಶ್ರೀರಾಮುಲು, ಬಾಸ್ಕರ್, ಶಿವಕುಮಾರ್,ಸಿದ್ದೇಶ್,ರಾಜೇಶ್,ರಾಮ್ ಬಾಬು,ಮಾಬುಸಾಬು ,ರತ್ನಮ್ಮ, ತಿಪ್ಪೇಸ್ವಾಮಿ ಇತರರು ಉಪಸ್ಥಿತರಿದ್ದರು

One attachment • Scanned by Gmail