ಆರೋಗ್ಯ ಕವಿಗೋಷ್ಠಿ ಸ್ಪರ್ಧೆಗೆ ಮೂವರು ಆಯ್ಕೆ

ಕಲಬುರಗಿ :ಏ.26:ಕೊರೋನಾ ರೂಪಾಂತರ 2ನೇ ಅಲೆ ಎಲ್ಲೆಡೆ ವ್ಯಾಪಿಸಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅನೇಕ ಸಾವುಗಳು ಸಂಭವಿಸುವುದನ್ನು ನೋಡುತ್ತಿದ್ದೇವೆ. ಈ ದಿಸೆಯಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಬಳಗ ಜಿಲ್ಲಾ ಘಟಕದ ಆಶ್ರಯದಲ್ಲಿ ಆರೋಗ್ಯ ಕುರಿತಾಗಿ ಆನ್‍ಲೈನ್ ಕವಿಗೋಷ್ಠಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಘಟಕದ ಜಿಲ್ಲಾಧ್ಯಕ್ಷ ಮಹಾಂತೇಶ್ ಎನ್. ಪಾಟೀಲ್ ಯಾತನೂರ್ ಅವರ ನೇತೃತ್ವದಲ್ಲಿ ‘ಆರೋಗ್ಯ’ ಎಂಬ ಶೀರ್ಷಿಕೆಯಡಿ ಆಯೋಜಿಸಿದ ಕವಿಗೋಷ್ಠಿಯಲ್ಲಿ ಜಿಲ್ಲೆಯ ಅನೇಕ ಯುವ ಕವಿಗಳು, ಹಿರಿಯರು ಭಾಗವಹಿಸಿದರು. ಅವರಲ್ಲಿ ಅತ್ಯುತ್ತಮ ಮೂರು ಕವನಗಳನ್ನು ಆಯ್ಕೆ ಮಾಡಲಾಗಿದೆ. ಹಾಗೂ ಮೂರು ಮೆಚ್ಚುಗೆ ಕವನಗಳೆಂದು ಆಯ್ಕೆ ಮಾಡಲಾಗಿದೆ.
ಶಿಕ್ಷಕಿ ಮಹಾದೇವಿ ಅಷ್ಠಗಿ (ಪ್ರಥಮ), ಸಂಗಮ್ಮ ದರ್ಮುರಕರ್ (ದ್ವಿತೀಯ) ಹಾಗೂ ವಿಜಯಲಕ್ಮೀ ಗುತ್ತೇದಾರ್ (ತೃತೀಯ) ಸ್ಥಾನಗಳಿಗೆ ಆಯ್ಕೆಯಾದರು. ಹಾಗೂ ಗಂಗಮ್ಮ ನಾಲವಾರ್, ಭಾರತಿ ಗುತ್ತೇದಾರ್, ರವಿಕುಮಾರ್ ನಂದಗೇರಿ ಅವರ ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದವು. ಶಿಕ್ಷಕಿ ಮಲ್ಲಮ್ಮ ಎಸ್. ಕಾಳಗಿ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು. 25 ಜನ ಕವಿಗಳು ಭಾಗವಹಿಸಿದ್ದರು. ಅವರ ಎಲ್ಲಾ ಕವನಗಳು ಅರ್ಥಪೂರ್ಣವಾಗಿದ್ದವು.