ಆರೋಗ್ಯ ಕವಚದಿಂದ ಅರವಟ್ಟಿಗೆ ಆರಂಭ

ದೇವದುರ್ಗ.ಮಾ.೩೧- ತಾಲೂಕಿನ ಗಬ್ಬೂರು ಹೊಸ ಬಸ್ ನಿಲ್ದಾಣದಲ್ಲಿ ಗಬ್ಬೂರು ಸಮುದಾಯ ಆರೋಗ್ಯ ಕೇಂದ್ರದ ೧೦೮ ಆರೋಗ್ಯ ಕವಚ ಸಿಬ್ಬಂದಿಯಿಂದ ಕುಡಿವ ನೀರಿನ ಅರವಟ್ಟಿಗೆಯನ್ನು ಶುಕ್ರವಾರ ಪ್ರಾರಂಭಿಸಲಾಗಿದೆ.
ವೈದ್ಯಾಧಿಕಾರಿ ಸಿದ್ದರಾಮೇಶ್ವರ ಮಾತನಾಡಿ, ಬೇಸಿಗೆಯಲ್ಲಿ ಜನರು ಹಾಗೂ ಪ್ರಯಾಣಿಕರ ದಾಹ ನೀಗಿಸಲು ಅರವಟ್ಟಿಗೆ ತೆರೆಯಲಾಗಿದೆ. ಈ ಜಾಗದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಬೇಸಿಗೆಯಲ್ಲಿ ಜೀವ ಸಂಕುಲಕ್ಕೆ ಊಟಕ್ಕಿಂತ ನೀರಿನ ಅಗತ್ಯ ಅವಶ್ಯಕತೆ ತಂಬಾ ಇದೆ. ಬರಗಾಲ ಇರುವುದರಿಂದ ಬಿಸಿನ ಪ್ರಖರತೆ ಹೆಚ್ಚಿದ್ದು ಜನ ಜಾನುವಾರಿಗೆ ಹೆಚ್ಚಿನ ಜಲಧಾಹ ಆಗಲಿದೆ. ಹೀಗಾಗಿ ನಿಮ್ಮ ಮನೆ ಮೇಲೆ, ಗಿಡಮರಗಳಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು ಎಂದರು.
ಆರೋಗ್ಯ ಕವಚ ನೌಕರರಾದ ಚೋಳೆಂದ್ರಯ್ಯ ಹಿರೇಮಠ, ಮುದುಕಪ್ಪ ನಾಯಕ, ಲಕ್ಷ್ಮಪ್ಪ, ಮಲ್ಲೇಶ, ಮರಿಯಪ್ಪ ಬಡಿಗೇರ ಇತರರಿದ್ದರು.