ಆರೋಗ್ಯ ಕರ್ನಾಟಕ ಪ್ರಬಂಧ ಸ್ಪರ್ಧೆ ಬಹುಮಾನ ವಿತರಣೆ

ಅಫಜಲಪುರ,ಏ.1-ತಾಲೂಕಿನ ಬಂದರವಾಡ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತ ಆರೋಗ್ಯ ಕರ್ನಾಟಕ ಪ್ರಬಂಧ ಸ್ಪರ್ಧೆ ಮತ್ತು ಕೋವಿಡ್-19 ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೊಬ್ಬರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಧರ್ ಅವರು ಕೋವಿಡ್-19 ಸೋಂಕು ತಗುಲದಂತೆ ಹೇಗೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಮಕ್ಕಳಿಗೆ ತಿಳಿಸಿಕೊಟ್ಟರು ಅಲ್ಲದೆ ಮನೆಯಲ್ಲಿ ಕೂಡ ಪಾಲಕರಿಗೆ ಅದನ್ನು ತಿಳಿಸಿ ಕೊಡುವಂತೆ ಹೇಳಿದರು. ನಂತರದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಈ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಪ್ರಥಮ ಸ್ಥಾನ ಪಡೆದ 10ನೇ ತರಗತಿ ವಿದ್ಯಾರ್ಥಿನಿ ಗುಂಡಮ್ಮ ತಂದೆ ಮಹಾಂತಪ್ಪ ಅವರಿಗೆ 750 ರೂಪಾಯಿ, ದ್ವಿತೀಯ ಸ್ಥಾನ ಪಡೆದ 9ನೇ ತರಗತಿ ವಿದ್ಯಾರ್ಥಿನಿ ಜೋಹಾ ಅಜರಾ ತಂದೆ ಮಹಬೂಬಸಾಬ 500 ರೂಪಾಯಿ ಮತ್ತು ತೃತೀಯ ಸ್ಥಾನ ಪಡೆದ 10ನೇ ತರಗತಿ ವಿದ್ಯಾರ್ತಿನಿ ವೈಶಾಲಿ ತಂದೆ ಬಸವರಾಜ ಅವರಿಗೆ 300 ರೂಪಾಯಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯಗುರುಗಳಾದ ವೇಳಾಪಟ್ಟಿ ವಿಜ್ಞಾನ ಶಿಕ್ಷಕಿ ಸುರೇಖಾ ಜೆ.ಡಿ., ಬಂದರವಾಡ ಆರೋಗ್ಯ ಅಧಿಕಾರಿ ಭುವನೇಶ್ವರಿ ಹಾಗೂ ರಾಜೇಶ್ವರಿ, ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಮಾಜ ವಿಜ್ಞಾನ ಶಿಕ್ಷಕ ವಿಜಯಕುಮಾರ ಸೂರಪ್ಪನೊರ ಕಾರ್ಯಕ್ರಮದ ನಿರೂಪಣೆ ಮಾಡಿದರು.