ಆರೋಗ್ಯ ಇಲಾಖೆ ಸಿಬ್ಬಂದಿಗೆ ಉಪಾಹಾರ ವಿತರಣೆ

ದೇವದುರ್ಗ: ತಾಲೂಕಿನ ಜಾಲಹಳ್ಳಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ರೋಗಿಗಳಿಗೆ ಪಟ್ಟಣದ ಉಡುಪಿ ಮೀನಾಕ್ಷಿ ಹೋಟೆಲ್ ಮಾಲೀಕ ಹನುಮೇಶ ಕೃಷ್ಣಪ್ಪ ಉಚಿತವಾಗಿ ಉಪಹಾರ, ಕುಡಿವ ನೀರು ಸೋಮವಾರ ವಿತರಣೆ ಮಾಡಿದರು.
ಭಾನುವಾರದಿಂದ ಮೂರು ದಿನಗಳ ಕಾಲ ಯಾವುದೇ ಹೋಟೆಲ್‌ಗಳು ತೆರೆಯದೇ ಇರುವುದರಿಂದ ಆಸ್ಪತ್ರೆಗೆ ಬಂದಿರುವ ರೋಗಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ತುಂಬಾ ತೊಂದರೆ ಉಂಟಾಗಿರುವುದನ್ನು ಗನಿಸಿ ಸೋಮವಾರ ಹಾಗೂ ಮಂಗಳವಾರ ಎರಡು ದಿನ ಅವರಿಗೆ ಉಪಾಹಾರದ ವ್ಯವಸ್ಥೆ ಮಾಡುವುದು ಸೂಕ್ತ ಎಂದು ವಿತರಣೆ ಮಾಡಿದರು.
ಬಹುತೇಕ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಿಬ್ಬಂದಿ ನಿತ್ಯ ತಮ್ಮ ಹೋಟೆಲ್‌ನಿಂದಲೇ ಉಪಾಹಾರ ಖರೀದಿಸುತ್ತಿದ್ದರು. ಅದರೆ, ಸಂಪೂರ್ಣ ಲಾಕ್‌ಡೌನ್‌ಗೆ ಆದೇಶ ಮಾಡಿರುವುದರಿಂದ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತೊಂದರೆಯಾಗಿದೆ. ಅವರು ತಮ್ಮ ನೋವು ಹೇಳಿಕೊಂಡ ಹಿನ್ನೆಲೆ ರೋಗಿಗಳಿಗೆ ಹಾಗೂ ಸಿಬ್ಬಂದಿಗೆ ಎರಡು ದಿನಗಳ ಮಟ್ಟಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗುವುದು ಎಂದು ಹನುಮೇಶ ತಿಳಿಸಿದರು.
ಅಲ್ಲದೇ ಲಾಕ್‌ಟೌನ್ ಸರಿಯಾಗಿ ಜಾರಿ ಮಾಡಲು ರಸ್ತೆಗಳಲ್ಲಿ ನಿಂತು ಜನರನ್ನು ರಕ್ಷಣೆ ಮಾಡುವ ಪೊಲೀಸ್ ಸಿಬ್ಬಂದಿಗಳಿಗೆ ಉಪಹಾರದ ವ್ಯವಸ್ಥೆ ಮಾಡಿದರು. ಈ ಸಂದರ್ಭದಲ್ಲಿ ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಹಾದೇಪ್ಪ, ಹನುಮೇಶ ಉಡುಪಿ, ಸಿಬ್ಬಂದಿ ರಾಜು, ವಿರೇಶ, ಖಾನ್ ಸಾಬ್, ವಿರೇಶ ಪಾಟೀಲ್ ಮೇದಿನಾಪುರ, ಸಂಗಮೇಶ ಮೂಲಿಮನಿ, ಮೂನ್ನಾ, ಅಣ್ಣಯ್ಯ ಉಡುಪಿ, ವೆಂಕಟೇಶ ಪಾನ್ ಪಾಶ್ ಇದ್ದರು.