ಆರೋಗ್ಯ ಇಲಾಖೆ ವತಿಯಿಂದ ಸಮೀಕ್ಷೆ

ಕರಜಗಿ:ಸೆ.21:ಆರೋಗ್ಯ ಇಲಾಖೆ ವತಿಯಿಂದ ಆಶಾಕಿರಣ ಸಮೀಕ್ಷೆ ಕಾರ್ಯಕ್ರಮ ಅಡಿಯಲ್ಲಿ ಕಣ್ಣಿನ ಸ್ರ್ಕೀನಿಂಗ ಮಾಡಲು ಮಣ್ಣೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಶಾ ಕಾರ್ಯಕರ್ತೆಯರು ಸಮೀಕ್ಷೆ ನಡೆಸುತ್ತಿದ್ದಾರೆ
ಆರೋಗ್ಯ ಇಲಾಖೆ ಸಿಬ್ಬಂದಿಗಳು ತಮ್ಮ ಮನೆಗೆ ಬಂದಾಗ ಅವರು ಕೇಳುವ ಮಾಹಿತಿ ನೀಡಬೇಕು ಸರ್ಕಾರದಿಂದ ಉಚಿತವಾಗಿ ದೊರೆಯುವ ಕನ್ನಡಕ ಹಾಗೂ ನೇತ್ರ ಚಿಕಿತ್ಸೆಗೆ ಅನುಕೂಲವಾಗಲಿದೆ ಆದ್ದರಿಂದ ಎಲ್ಲರೂ ಇದರ ಲಾಭ ಪಡೆಯಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ
ಆಶಾ ಕಾರ್ಯಕರ್ತೆಯರಾದ ಸುಜಾತಾ ಪತ್ತಾರ ಭೌರಮ್ಮ ಲೋಹಾರ ಶಬಾನಾ ಕೊರಬು ಕವಿತಾ ಹಡಪದ ಅಶ್ವಿನಿ ಬರಗಾಲೆ ಮಾಯಕ್ಕ ಪೂಜಾರಿ ಗೌರಾಬಾಯಿ ಮೋಸಲಗಿ ಸರೋಜಾ ಕ್ಷತ್ರಿ ರಾಣಿ ನಂದಗಾಂವ ಪಾರ್ವತಿ ಬ್ಯಾಗಳ್ಳಿ ಲಕ್ಷ್ಮಿ ತೊಗರಳ್ಳಿ ಕಮಲಾ ಬಜಂತ್ರಿ ಸೇರಿದಂತೆ ವೈದ್ಯರು ಹಾಗೂ ಸಿಬ್ಬಂದಿಗಳಿದ್ದರು.