ಆರೋಗ್ಯ ಇಲಾಖೆ ನೌಕರ ಎಂ.ಪ್ರಶಾಂತಕುಮಾರ್ ನಿಧನ

ಸಂಡೂರು:ಅ:30: ಪಟ್ಟಣದ 100 ಹಾಸಿಗೆ ಆಸ್ಪತ್ರೆಯಲ್ಲಿ ರಾತ್ರಿ ಇಡೀ ಕರ್ತವ್ಯ ನಿರ್ವಹಿಸಿ ಬೆಳಿಗ್ಗೆ ಅಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ಡಿ. ಗ್ರೂಪ್ ನೌಕರ ಎಂ.ಪ್ರಶಾಂತ ಕುಮಾರ್ (26) ನಿಧನರಾಗಿದ್ದಾರೆ.
ಮೃತರು ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿ ಕಳೆದ 5 ವರ್ಷಗಳಿಂದ ಡಿ. ಗ್ರೂಪ್ ನೌಕರರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ಇವರು ಕೊಪ್ಪಳ ಜಿಲ್ಲೆಯ ಕುಷ್ಟಗಿಯವರಾಗಿದ್ದರು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಹೆಚ್ಚಿನ ಎದೆ ನೋವು ಕಂಡುಬಂದಾಗ ಡಾ. ರಾಮಶೆಟ್ಟಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಅಂಬ್ಯೂಲೆನ್ಸ್‍ನಲ್ಲಿ ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗಮದ್ಯದಲ್ಲಿಯೇ ನಿಧನರಾಗಿದ್ದಾರೆ. ಮೃತ ಪ್ರಶಾಂತ ಕುಮಾರ್.ಎಂ. ತಂದೆಯನ್ನು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ,
ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಅಸ್ಪತ್ರೆಯ ಸಿಬ್ಬಂದಿ ಅಸ್ಪತ್ರೆಯ ಅವರಣಕ್ಕೆ ಅಗಮಿಸಿ ಅವರ ದು:ಖ ಮುಗಿಲು ಮುಟ್ಟಿತ್ತು. ಪ್ರತಿಯೊಬ್ಬ ಸಿಬ್ಬಂದಿಯೂ ಸಹ ನೆನೆದು ದು:ಖವನ್ನು ವ್ಯಕ್ತಪಡಿಸಿದರು, ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿ ದೇಹವನ್ನು ಅವರ ಸ್ವ ಗ್ರಾಮಕ್ಕೆ ಕಳುಹಿಸಲಾಯಿತು.