ಆರೋಗ್ಯ ಇಲಾಖೆ ಎಡವಟ್ಟು 6 ತಿಂಗಳ ನಂತರ ಬಂದ ಕೊವಿಡ್ ವರದಿ

ಆಳಂದ ;ಮೇ.1: ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆರೋಗ್ಯ ಇಲಾಖೆ ಕೊವಿಡ್ ತಪಾಸಣೆ ತಿವ್ರಗೊಳಿಸಿ ಸೊಂಕು ಇರುವುರಿಗೆ ಚಿಕಿತ್ಸೆ ಸಿಗಯವಂತೆ ಮಾಡುವ ಭರಾಟೆಯಲ್ಲಿ ಪಾಜಿಟಿವ್ ಬಂದ ವ್ಯಕ್ತಿಯ ಸಂಪರ್ಕದಲ್ಲಿ ಇದ್ದ ಎಲ್ಲರನ್ನು ತಪಾಸಣೆ ಮಾಡುತ್ತಿದೆ ಆದರೆ ತಪಾಸಣೆ ವರದಿಗಳು ಮಾತ್ರ ಬರಲು ವಾರಗಟ್ಟಲೆ ಕಾಯುವಂತಾಗಿದೆ.
ಆದರೆ ಇದಕ್ಕೆ ಬಿನ್ನವಾಗಿ ಆರೋಗ್ಯ ಇಲಾಖೆ ಗುರುವಾರ ಅಂದರೆ 29/04/2021ರ ಬುಲೆಟ್‍ನಲ್ಲಿ ಬಂದ ಪಾಜಿಟಿವ್ ವರದಿಗಳ ಪ್ರಕರಣದಲ್ಲಿ ಆರು ತಿಂಗಳ ಹಿಂದೆ ಮಾಡಿಸಿಕೊಂಡ ತಪಸಾಣೆ ವರದಿ ಪ್ರಕಟಿಸಿದೆ. ಗುರುವಾರ ಬಂದ ಪಾಜಿಟಿವ್ ವರದಿಯಿಂದ ವ್ಯಕ್ತಿಯನ್ನು ಪೆಚಿಗೆ ಸಿಲುಕುವಂತೆ ಮಾಡಿದೆ. ಆಳಂದ ತಾಲೂಕಿನ ಚಲಗೇರಾ ಗ್ರಾಮದ ಕೆಎಲ್.ಬಿ 21728 ಪಿ794829 ವ್ಯಕ್ತಿಗೆ ಹೀಗೆ ಆಗಿದೆ. ಆರು ತಿಂಗಳ ಹಿಂದೆ 20/10/2020 ರಂದು ತಪಸಾಸಣೆ ಮಾಡಿಸಿಕೊಂಡ ವರದಿ ಪ್ರಕಟಿಸಿದೆ ಪಾಜಿಟಿವ ಬಂದ ವ್ಯಕ್ತಿಗೆ ದೂರವಾಣಿಯ ಮೂಲಕ ಸಂಪರ್ಕಿಸಿ ನೀವು ಯಾವಾಗ ತಪಾಸಣೆ ಮಾಡಿಸಿಕೊಂಡಿದ್ದಿರಿ ನಿಮ್ಮದು ಪಾಜಿಟಿವ ವರದಿ ಬಂದಿದೆ ಮನೆಯಲ್ಲೆ ಇರಿ ಎಂದಾಗ ನಾನು ತಪಾಸಣೆ ಮಾಡಿಸಿಕೊಂಡಿಲ್ಲ ನಾನು ಆರೋಗ್ಯವಾಗಿಯೆ ಇದ್ದೇನೆ ಅದು ಹೇಗೆ ಪಾಜಿಟಿವ ನೀಡುತ್ತಿರಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಖಡಕ್ಕಾಗಿ ತರಾಟೆಗೆ ತಗೆದುಕೊಂಡಿದ್ದಾರೆ.ಒಂದು ಕಡೆ ಹೆಚ್ಚುತ್ತಿರುವ ಪಾಜಿಟಿವ ಪ್ರಕರಣಗಳು ಒಂದು ಕಡೆ ಸಾವಿನ ಪ್ರಕರಣಗಳು ಇದರಿಂದ ಜನರು ಭಯಭಿತರಾಗಿದ್ದಾರೆ. ಇಂಥ ಸಂಧರ್ಬದಲ್ಲಿ ಈ ಥರದ ಆರೋಗ್ಯ ಇಲಾಖೆಯ ತಪ್ಪಿನಿಂದ ಕೆಲವರಿಗೆ ವರದಿ ಪಾಜಿಟಿವ ಬರುತ್ತದೆ ಸಂದೇಶ ನೆಗಟಿವ್ ಬರುತ್ತದೆ ಇದರಿಂದ ಆರೋಗ್ಯ ಇಲಾಖೆಯನ್ನು ಸಂಶಯದ ದೃಷ್ಟಿಯಿಂದ ನೋಡಿವಂತಾಗಿದೆ. ಸಾರ್ವಜನಿಕರರಿಗೆ ಈಗ ದೇವರು ಎಂದರೆ ಆರೋಗ್ಯ ಇಲಾಖೆಯೆ ಆಗಿದೆ ಜೀವ ಕೈಯಲ್ಲಿ ಹಿಡಿದು ಜನ ಬದುಕುತ್ತಿದ್ದಾರೆ ಇನ್ನು ಮುಂದಾರೂ ಇಲಾಖೆ ಇಂಥ ತಪ್ಪು ಮಾಡದೆ ಸರಿಯಾದ ಸಮಯದಲ್ಲಿ ಬೇಗನೆ ವರದಿ ನೀಡಿ ಸೊಂಕಿತರಿಗೆ ಸೂಕ್ತ ಚಿಕಿತ್ಸೆ ಸಿಕ್ಕು ಪ್ರಾಣ ಉಳಿಯುವಂತಾಗಲಿ ಎಂಬುವುದು ಸಾರ್ವಜನಿಕರ ಕಳಕಳಿಯಾಗಿದೆ.