ಆರೋಗ್ಯ ಇಲಾಖೆಯ ಸೇವಾ ಸೌಲಭ್ಯಗಳ ಮಾಹಿತಿ


ಸಂಜೆವಾಣಿ ವಾರ್ತೆ
ಸಂಡೂರು: ಮೇ: 20: ತಾಲೂಕಿನ ಬಾಲ ಚೈತನ್ಯ ಶಿಬಿರದಲ್ಲಿ ಹದಿನಾಲ್ಕು ದಿನಗಳ ಕಾಲ ಮಕ್ಕಳ ಆರೈಕೆ ಮಾಡಲಾಗುತ್ತಿದ್ದು, ಮಕ್ಕಳ ತಾಯಂದಿರಿಗೆ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಸೇವಾ ಸೌಲಭ್ಯಗಳ ಮಾಹಿತಿಯನ್ನು ತಿಳಿಯಪಡಿಸಲು ಜಿಲ್ಲಾ ಐ.ಇ.ಸಿ ವಿಭಾಗದಿಂದ ವಿಡಿಯೋ ಪ್ರದರ್ಶನ ಏರ್ಪಡಿಸಲಾಗಿತ್ತು, ವಿಡಿಯೋ ಮೂಲಕ ಋತುಚಕ್ರ, ಟಿ.ಬಿ, ಕುಷ್ಠರೋಗ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ, ವೈಯಕ್ತಿಕ ಸುಚಿತ್ವ, ಮತ್ತು ಡೆಂಗ್ಯೂ ಚಿಕೂನ್ ಗುನ್ಯಾ, ಮಲೇರಿಯಾ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಯಿತು,
 ಈ ಸಂದರ್ಭದಲ್ಲಿ ಸಿ.ಡಿ.ಪಿ.ಓ ಎಳೆನಾಗಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಭರತ್ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಮಹಿಳಾ ಮೇಲ್ವಿಚಾರಕರಾದ ಎಮ್.ಎಮ್ ಭಜಂತ್ರಿ, ಎ.ಪಿ ಕುಂಬಾರ್,ಚೇತನಗೌಡ, ಶಾರದಾ ಶಿಂದೆ, ಪೋಷಣ ಅಭಿಯಾನ ಸಂಯೋಜಕ ಲಿಂಗರಾಜು, ಎಮ್.ಆರ್. ಡಬ್ಲ್ಯೂ ಕರಿಬಸಜ್ಜ, ಮತ್ತು ಮಕ್ಕಳ ತಾಯಂದಿರು ಹಾಜರಿದ್ದರು