
ಮಾನ್ವಿ,ಆ.೧೦-
ಎಲ್ಲಾ ಜನರ ಆರೋಗ್ಯ ಕಾಪಡುವಲ್ಲಿ ಆರೋಗ್ಯ ಇಲಾಖೆಯ ಜೊತೆಗೆ ತಾಲೂಕಿನ ಎಲ್ಲಾ ಇಲಾಖೆಗಳು ಸಹಕಾರ ನೀಡಿ ಕಾರ್ಯ ನಿರ್ವಹಿಸಿದ್ದಲ್ಲಿ ಮಾತ್ರ ತಾಲೂಕಿನ ಎಲ್ಲಾ ಜನರಿಗೆ ಉತ್ತಮ ಆರೋಗ್ಯವನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ತಾಲೂಕ ದಂಡಧಿಕಾರಿ ಪರಂಗಿ ರಾಜು ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ತಾಲೂಕು ಮಟ್ಟದ ಟಾಸ್ಕ ಪೋರ್ಸ ಸಭೆಯಲ್ಲಿ ಮಾತಾನಾಡಿದ ಅವರು ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಬರುವ ಮಾರಣಾಂತಿಕ ಕಾಯಿಲೆಗಳನ್ನು ತಡೆಯಲು ಅಗತ್ಯ ಲಸಿಕೆಗಳನ್ನು ನೀಡಲು ಇಂದ್ರಧನುಷ್ಯ ೦.೫ ಕಾರ್ಯಕ್ರಮವನ್ನು ಹಾಕಿಕೊಂಡಿದ್ದು ಕಾರ್ಯಕ್ರಮದ ಯಶಸ್ಸಿಗೆ ಶಿಕ್ಷಣ ಇಲಾಖೆ,ಶಿಶುಅಭಿವೃದ್ದಿ ಇಲಾಖೆ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಪುರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವುದಕ್ಕೆ ಅಗತ್ಯವಾದ ಕ್ರಮವನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ಆರೋಗ್ಯಧಿಕಾರಿ ಡಾ.ಚಂದ್ರಶೇಖರಯ್ಯಸ್ವಾಮಿ ಮಾತನಾಡಿ ತಾಲೂಕು ಆರೋಗ್ಯ ಇಲಾಖೆಯಿಂದ ೦ಯಿಂದ ೧೨ ವರ್ಷದ ವರೆಗಿನ ಮಕ್ಕಳಿಗೆ ಗಂಭಿರ ಕಾಯಿಲೆಗಳು ಬರದಂತೆ ೧೨ ಲಸಿಕೆಗಳನ್ನು ಹಾಕಲಾಗುತ್ತಿದೆ. ಮಾನ್ವಿ, ಮಸ್ಕಿ, ಸಿರವಾರ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ೪೩೫ ಗರ್ಭಿಣಿ ಮಹಿಳೆಯರಿಗೆ, ೦ ದಿಂದ ೨ ವರ್ಷದೊಳಗಿನ ೨೬೩೪ ಮಕ್ಕಳಿಗೆ ಹಾಗೂ ಮಾನ್ವಿ ಪಟ್ಟಣದ ವ್ಯಾಪ್ತಿಯಲ್ಲಿನ ೨ರಿಂದ ೫ವರ್ಷದೊಳಗಿನ ೪೦೧ ಲಸಿಕೆ ವಂಚಿತ ಮಕ್ಕಳನ್ನು ಗುರುತಿಸಿದ್ದು ಇಂತಹ ಮಕ್ಕಳಿಗೆ ಲಸಿಕೆಯನ್ನು ಹಾಕಲು ೧೨ ಸಂಚಾರಿ ತಂಡಗಳು, ೨೧೭ ಸ್ಥಿರ ತಂಡಗಳನ್ನು ರಚಿಸಿ ಮಕ್ಕಳಿಗೆ ಅ.೧೨ರವರೆಗೆ ಲಸಿಕೆಯನ್ನು ಹಾಕುವುದಕ್ಕೆ ಕ್ರಮಕೈಗೊಳ್ಳಲಾಗಿದೆ ಗ್ರಾಮೀಣ ಭಾಗದಲ್ಲಿನ ವಲಸೆ ಕೂಲಿ ಮಾಡುವವರ ಕುಟುಂಬದಲ್ಲಿನ ಮಕ್ಕಳಿಗೆ ಹಾಗೂ ಕೊಳಗೇರಿಗಳಲ್ಲಿ ವಾಸಿಸುವವರ ಮಕ್ಕಳಿಗೆ ವಿಶೇಷವಾಗಿ ಜಾಗೃತಿ ಮೂಡಿಸಿ ಲಸಿಕೆಯನ್ನು ಹಾಕಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರರು, ದಲಿತ ಪರ ಸಂಘಟನೆಯವರು, ಅಧಿಕಾರಿಗಳು ಇದ್ದರು.