ಆರೋಗ್ಯ ಆದತ್ಯೆಗಾಗಿ ವಿಶ್ವ ರೋಗಿಗಳ ಸುರಕ್ಷತಾ ದಿನ

‘ವಿಶ್ವ ರೋಗಿಗಳ ಸುರಕ್ಷತಾ ದಿನ’ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ರೋಗಿಗಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಜಾಗತಿಕ ಅಭಿಯಾನವನ್ನು ಆರಂಭಿಸಲಿದೆ.

ರೋಗಿಗಳ ಸುರಕ್ಷತೆಗೆ ಬದ್ಧತೆಯನ್ನು ತೋರಿಸಲು ವಿಶ್ವ ರೋಗಿಗಳ ಸುರಕ್ಷತಾ ದಿನವನ್ನು ಆಚರಿಸಲಾಗುತ್ತಿದ್ದು, ರೋಗಿಗಳು, ಕುಟುಂಬಗಳು, ಆರೈಕೆ ಮಾಡುವವರು, ಸಮುದಾಯಗಳು, ಆರೋಗ್ಯ ಕಾರ್ಯಕರ್ತರು, ಆರೋಗ್ಯ ರಕ್ಷಣೆ ನಾಯಕರು ಮತ್ತು ನೀತಿ ನಿರೂಪಕರನ್ನು ಈ ದಿನ ಒಟ್ಟುಗೂಡಿಸಲಿದೆ.

ಪ್ರಿಮಮ್ ನಾನ್ ನೊಸೆರೆಯ ಮೊದಲ ತತ್ವವೆಂದರೆ ರೋಗಿಯ ಆರೋಗ್ಯ ರಕ್ಷಣೆ. ರೋಗಿಯ ಆರೋಗ್ಯ ತಪಾಸಣೆ ಮಾಡುವಾಗ ಯಾವುದೇ ತೊಂದರೆ ಆಗದಂತೆ ತಡೆಯುವುದು ಇದರ ಉದ್ದೇಶವಾಗಿದೆ. ರೋಗಿಗಳ ಸುರಕ್ಷತೆಯನ್ನು ಜಾಗತಿಕ ಆರೋಗ್ಯ ಆದ್ಯತೆಯೆಂದು ಗುರುತಿಸಿ, 72ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ಎಲ್ಲಾ 194 ಡಬ್ಲ್ಯುಎಚ್‌ಒ ಸದಸ್ಯ ರಾಷ್ಟ್ರಗಳು, 2019 ರ ಮೇ ತಿಂಗಳಲ್ಲಿ ವಿಶ್ವ ರೋಗಿಗಳ ಸುರಕ್ಷತಾ ದಿನವನ್ನು (ರೆಸಲ್ಯೂಶನ್ ಡಬ್ಲ್ಯುಎಚ್‌ಎ 72.6) ಆಚರಿಸಲು ಅನುಮೋದಿಸಿದವು. ಬಳಿಕ ಪ್ರತಿವರ್ಷ ಸೆಪ್ಟೆಂಬರ್ 17ರಂದು ಈ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ರೋಗಿಗಳ ಸುರಕ್ಷತಾ ದಿನದ ಪ್ರಮುಖ ಉದ್ದೇಶವೆಂದರೇ, ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅವರು ತೊಡಗಿಕೊಳ್ಳುವಂತೆ ಮಾಡುವುದು.

ರೋಗಿಯ ಸುರಕ್ಷತೆ:ರೋಗಿಗೆ ಚಿಕಿತ್ಸೆಯನ್ನು ನೀಡುವಾಗ ಸುರಕ್ಷಿತವಾಗಿ ನೀಡುವುದು, ಜೊತೆಗೆ ಆಗಬಹುದಾದ ಹಾನಿಯನ್ನು ತಡೆಗಟ್ಟುವುದು, ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಅನಗತ್ಯ ಹಾನಿಯ ಅಪಾಯವನ್ನು ತಗ್ಗಿಸುವುದು.ಆರೈಕೆ ಮಾಡುವ ಪ್ರಕ್ರಿಯೆಯ ಪ್ರತಿಯೊಂದು ಹಂತವು ಒಂದು ನಿರ್ದಿಷ್ಟ ಮಟ್ಟದ ಅಂತರ್ಗತ ಅಸುರಕ್ಷಿತತೆಯನ್ನು ಹೊಂದಿರುತ್ತದೆ.ಸ್ಪಷ್ಟ ನೀತಿಗಳು, ಸಾಂಸ್ಥಿಕ ನಾಯಕತ್ವದ ಸಾಮರ್ಥ್ಯ, ಸುರಕ್ಷತಾ ಸುಧಾರಣೆಗಳನ್ನು ಹೆಚ್ಚಿಸುವ ದತ್ತಾಂಶ, ನುರಿತ ಆರೋಗ್ಯ ವೃತ್ತಿಪರರು ಮತ್ತು ಅವರ ಆರೈಕೆಯಲ್ಲಿ ರೋಗಿಗಳು ಪರಿಣಾಮಕಾರಿಯಾಗಿ ಒಳಗೊಳ್ಳುವುದು.

Who ಪ್ರಕಾರ _ಕಡಿಮೆ ಮತ್ತು ಮಧ್ಯಮ-ಆದಾಯ ದೇಶಗಳ ಆಸ್ಪತ್ರೆಗಳಲ್ಲಿ (ಭಾರತವೂ ಸೇರಿದೆ) ಅಸುರಕ್ಷಿತ ಆರೈಕೆಯಿಂದಾಗಿ ಪ್ರತಿವರ್ಷ 134 ಮಿಲಿಯನ್ ರೋಗಿಗಳ ಸಾವು ಸಂಭವಿಸುತ್ತಿದೆ. ಇದು ವಾರ್ಷಿಕವಾಗಿ 2.6 ಮಿಲಿಯನ್ ಸಾವುಗಳಿಗೆ ಕಾರಣವಾಗಿದೆ.10 ರೋಗಿಗಳಲ್ಲಿ 4 ರೋಗಿಗಳು ಪ್ರಾಥಮಿಕ ಮತ್ತು ಆಂಬ್ಯುಲೇಟರಿ ಸೆಟ್ಟಿಂಗ್‌ಗಳಲ್ಲಿ ಹಾನಿಗೊಳಗಾಗುತ್ತಾರೆ. ಈ ಸೆಟ್ಟಿಂಗ್‌ಗಳಲ್ಲಿ ಶೇ.80ರಷ್ಟು ಹಾನಿಯನ್ನು ತಪ್ಪಿಸಬಹುದು.ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಯು ಆರೋಗ್ಯ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಬದಲಾವಣೆಯನ್ನು ತಂದಿದೆ.

ಈ ಸಂಕೀರ್ಣತೆಯು ರೋಗಿಯನ್ನು ಸುರಕ್ಷಿತವಾಗಿರಿಸಲು, ಆರೋಗ್ಯ ಸಿಬ್ಬಂದಿಗೆ ಅನೇಕ ಸವಾಲುಗಳನ್ನು ತರುತ್ತದೆ. ಆದರೂ, ಬಹಳಷ್ಟು ಜನರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಕೆಲವು ಬಾರಿ ತಪ್ಪಾಗಬಹುದು.ಆಸ್ಪತ್ರೆ ಎಂಬುದು 24 ಗಂಟೆಯೂ ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ನೀಡುವ ಸ್ಥಳವಾಗಿದೆ. ರೋಗಿಗಳ ಆರೈಕೆ ಸುರಕ್ಷತೆಯ ಪ್ರತಿಯೊಂದು ಪ್ರಕ್ರಿಯೆಯು ಒಂದು ನಿರ್ದಿಷ್ಟ ಮಟ್ಟದ ಅನಿಶ್ಚಿತತೆಯನ್ನು ಒಳಗೊಂಡಿರುತ್ತದೆ.ರೋಗಿಗಳ ಸುರಕ್ಷತೆಯ ಜಾಗತಿಕ ತಿಳುವಳಿಕೆಯನ್ನು ಹೆಚ್ಚಿಸುವುದು, ಆರೋಗ್ಯ ರಕ್ಷಣೆಯ ಸುರಕ್ಷತೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಮತ್ತು ರೋಗಿಗಳ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ರೋಗಿಗಳ ಹಾನಿಯನ್ನು ಕಡಿಮೆ ಮಾಡಲು ಜಾಗತಿಕ ಕ್ರಮಗಳನ್ನು ಉತ್ತೇಜಿಸುವುದು ವಿಶ್ವ ರೋಗಿಗಳ ಸುರಕ್ಷತಾ ದಿನದ ಒಟ್ಟಾರೆ ಉದ್ದೇಶವಾಗಿದೆ.