ಆರೋಗ್ಯ ಅರಿವು ಶಿಬಿರ

ಕೋಲಾರ,ಮೇ.೯-ತಾಲ್ಲೂಕಿನ ಮಂಗಸಂದ್ರ ಬಳಿಯಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ತಮ್ಮ ಕ್ಷೇತ್ರ ಕಾರ್ಯದ ಭಾಗವಾಗಿ ರಾಮಲಿಂಗಾಪುರ ಗ್ರಾಮದಲ್ಲಿ ಗ್ರಾಮಸ್ಥರಿಗೆ ಆರೋಗ್ಯದ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬಂಗಾರಪೇಟೆ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಜ್ಯೋತಿಲಕ್ಷ್ಮಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಾಲ್ಯವಿವಾಹ, ಫೋಕ್ಸೋ ಕಾಯ್ದೆ, ಅಂಗನವಾಡಿ ಪ್ರಾಮುಖ್ಯತೆ ಅದರಿಂದ ಲಭ್ಯವಿರುವ ಸೌಲಭ್ಯಗಳು ಕುರಿತು ತಿಳಿಸಿಕೊಟ್ಟರು.
ಸಮುದಾಯ ಅಭಿವೃದ್ಧಿ ಅಧಿಕಾರಿ ಹೀನ ಹೆಚ್.ಎಂ, ಬಂಗಾರಪೇಟೆ ತಾಲೂಕು ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮ ಸಂಯೋಜಕ ವಿಜಯಕುಮಾರ್ ಎಂ.ವಿ ಅವರುಗಳು ಮಾನಸಿಕ ಆರೋಗ್ಯ, ಕ್ಷಯ ರೋಗ, ಮದುಮೇಹ, ರಕ್ತದೊತ್ತಡ, ರಕ್ತ ಹೀನತೆ, ಪೌಷ್ಟಿಕ ಆಹಾರ, ಮುಟ್ಟಿನ ನೈರ್ಮಲ್ಯ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಕೆ.ಜಿ.ಎಫ್.ತಾಲೂಕು ಕಾರ್ಯಕ್ರಮದ ಸಂಯೋಜಕ ರವಿತೇಜ ಹೆಚ್, ಕೆಸರನಹಳ್ಳಿ ಗ್ರಾಮ ಪಂಚಾಯಿತಿ ನರೇಗ ಡಿ.ಇ.ಓ ರಾಜಕುಮಾರ್, ಕಾರ್ಯಕ್ರಮದ ಆಯೋಜಕರಾದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳಾದ ಪ್ರಕಾಶ್ ಸಿ.ಎಸ್, ಕಾರ್ತಿಕ್ ಎಸ್, ನಾಗೇಶ್ ಕೆ, ಚಲಪತಿ ಎನ್ ಉಪಸ್ಥಿತರಿದ್ದರು.