ಆರೋಗ್ಯ ಅಧಿಕಾರಿ ಜಾವೀದ್ ಅಮಾನತಿಗೆ ಆಗ್ರಹ

ರಾಯಚೂರು.ಅ.೧೮-ಆಯುಷ್ಮಾನ್ ಭಾರತ್ ಸಿಎಚ್‌ಓ ಪ್ರಾಥಮಿಕ ಆರೋಗ್ಯ ಅಧಿಕಾರಿ ಎಂ.ಡಿ, ಜಾವೀದ್ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಆರೋಗ್ಯ ಆಂದೋಲನ ಸಮತಿ ಪದಾಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ತಾಲೂಕಿನ ಕಾಡ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಆಯುಷ್ಠಾನ ಭಾರತ ಆರೋಗ್ಯ ಕರ್ನಾಟಕದಡಿಯಲ್ಲಿ ಈ ಹಿಂದೆ ಇದ್ದ ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾಗಿ ಮಾರ್ಪಾಡು ಮಾಡಿ ಜನ ಜನರಿಗೆ ಉಚಿತವಾಗಿ ಪ್ರಾಥ ಮಿಕ ಹಂತದ ಚಿಕಿತ್ಸೆ, ಯೋಗಾಸನ, ಸಾಂಕ್ರಾಮಿಕ ರೋಗಗಳ ಬಗ್ಗೆ ತಪಾಸಣೆ ಮೂಲಕ ಉಚಿತ ಚಿಕೆತ್ಸೆ ನೀಡುತ್ತಿದ್ದರು.
ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಆರೈಕೆ, ಶಿಶುವಿನ ಆರೋಗ್ಯದ ಆರೈಕೆ, ಉಚಿತ ರೀತಿಯಲ್ಲಿ ನೀಡಿ ಸಂಪೂರ್ಣ ಗ್ರಾಮೀಣ ಜನರ ಆರೋಗ್ಯ ಸದೃಢವಾಗಿರಲು ಸಿ.ಹೆಚ್.ಓ. (ಕಮ್ಯೂನಿಟಿ ಹೆಜ್ಜೆ ಆಫೀಸರ) ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ದೂರಿದರು.
ಆದರೆ ಈ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸವಲತ್ತುಗಳ ಬಗ್ಗೆ ಗ್ರಾಮೀಣ ಜನರಿಗೆ ಮಾಹಿತಿ ತಿಳಿಸಿರುವುದಿಲ್ಲ. ನಮ್ಮ ಸಾಲ ಸಂಘಟನೆ ವತಿಯಿಂದ ಹಳ್ಳಿಗಳಿಗೆ ಭೇಟಿ ನೀಡಿದಾಗ ಅಲ್ಲಿನ ಜನರನ್ನು ಮತ್ತುಗರ್ಭಿಣಿಯನ್ನು
ವಿಚಾರಿಸಿದಾಗಯಾವುದೇ ಗ್ರಾಮಗಳಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಇದ್ದರು ಸಹ ಜನರಿಗೆ ವೈದ್ಯಕೀಯ ಸೇವೆ ಸಿಕ್ಕಿರುವುದಿಲ್ಲ. ಗ್ರಾಮೀಣ ಭಾಗದ ಬಡಜನರು ಇಂದಿಗೂ ಮಾಡಿ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ಕೈಗೊಳ್ಳುತ್ತಿಲ್ಲ ಬೇಜವಾಬ್ದಾರಿ ತನದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಆಗ್ರಹಿಸಿದರು. ನಿರ್ಲಕ್ಷ ಮುಂದುವರಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರಾಘವೇಂದ್ರ ಬೋರೆಡ್ಡಿ, ಎ. ರಾಮು, ಹೆಚ್ ಸತ್ಯರಾಜು ಸೇರಿದಂತೆ ಉಪಸ್ಥಿತರಿದ್ದರು.