ಆರೋಗ್ಯಶಿಶು ಪ್ರದರ್ಶನ ಕಾರ್ಯಕ್ರಮ ಪೋಷಕರು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿರಿ

ಕುರುಗೋಡು.ನ.21 ಪ್ರತಿಯೊಬ್ಬ ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು, ಅಂದಾಗ ಮಾತ್ರ ಮಕ್ಕಳು ಸದ್ರುಢ ಆರೋಗ್ಯವಂತರಾಗಲು ಸಾದ್ಯ ಎಂದು ಸಮುದಾಯ ಆರೋಗ್ಯಕೇಂದ್ರದ ಹಿರಿಯ ಆರೋಗ್ಯಸಹಾಯಕಿ ಸಹಾಯಮೇರಿ ತಾಯಂದಿರಿಗೆ ಕರೆನೀಡಿದರು.
ಅವರು ಶುಕ್ರವಾರ ಪಟ್ಟಣದ ಸಮುದಾಯ ಆರೋಗ್ಯಕೇಂದ್ರ ಕುರುಗೋಡು ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕುರುಗೋಡು ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ 5 ನೇ ಅಂಗನವಾಡಿಕೇಂದ್ರದಲ್ಲಿ ಜುರಿಗದ ಆರೋಗ್ಯಶಿಶು ಪ್ರದರ್ಶನ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ಆಸ್ಪತ್ರೆಯಿಂದ ಸಿಗುವ ಹಲವಾರು ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
8ನೇ ಅಂಗನವಾಡಿಕೇಂದ್ರದ ಶಿಕ್ಷಕಿ ಸಿ.ನೀಲಮ್ಮ ಮಾತನಾಡಿ, ತಾಯಂದಿರು ಮಕ್ಕಳಿಗೆ ಡೆಬ್ಬೆಹಾಲನ್ನು ಕುಡಿಸಬಾರದು, ಬದಲಾಗಿ ತಾಯಿಯ ಎದೆಹಾಲನ್ನು ಕುಡಿಸಬೇಕು. ಅಂದಾಗ ಮಾತ್ರ ಮಕ್ಕಳು ಪೌಷ್ಟಿಕವಾದಿಂದ ಬಾಳಲು ಸಾದ್ಯ ಎಂದು ಎದೆಹಾಲಿನ ಮಹತ್ವದ ಬಗ್ಗೆ ತಿಳಿಸಿದರು.
ಕಿರಿಯ ಆರೋಗ್ಯಸಹಾಯಕಿ ಮಹಾಲಕ್ಷಿ, 1ನೇ ಅಂಗನವಾಡಿಕೇದ್ರದ ಶಿಕ್ಷಕಿ ತ್ರಿವೇಣಿ, 5ನೇಕೇಂದ್ರದ ಶಿಕ್ಷಕಿ ಸಾವಿತ್ರಮ್ಮ, ಆಶಾಕಾರ್ಯಕರ್ತೆ ತ್ರಿಪುರಾಂಭ, ಉಮಾ ಸೇರಿದಂತೆ ಮಕ್ಕಳ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.