ಆರೋಗ್ಯವೇ ಭಾಗ್ಯ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಿ

ಕಮಲನಗರ:ಮೇ.2: ತಾಲ್ಲೂಕಿನ ಮದನೂರ ಗ್ರಾಮದಲ್ಲಿ ಯಾರೊಬ್ಬರೂ ಮಹಾಮಾರಿ ಕೋವಿಡ್ ಪ್ರಕರಣಕ್ಕೆ ತುತ್ತಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಳ್ಳುವುದರ ಜೊತೆಗೆ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಗ್ರಾಮ ಪಂಚಾಯತ್ ನಿರ್ವಾಹಕ ಅಧಿಕಾರಿ ದತ್ತಾತ್ರೇಯ ಪಾಟೀಲ್ ಮನೆ ಮನೆಗೆ ತೆರಳಿ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಗ್ರಾಮ ಪಂಚಾಯತ್ ವತಿಯಿಂದ ಹಮ್ಮಿಕೊಂಡ ಕೊರೊನಾ ಜನಜಾಗೃತಿ ನಿಮಿತ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರು ಗ್ರಾಮದ ಗಲಿಗಲಿಗಳಲ್ಲಿ ಸುತ್ತಾಡಿ ಗ್ರಾಮಸ್ಥರಿಗೆ ಮಾಸ್ಕ್ ಧರಿಸಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಗೃಹಬಂಧನದಲ್ಲಿ ಇರುವಂತೆ ಮನವಿ ಮಾಡಿದರು.

ಕೊರೊನಾ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಹರಿಬಾಜಿ ಶಂಕರ್ ಸರ್ಕಾರ‌ ನಿಗದಿ ಪಡಿಸಿದ ವಯಸ್ಸಿಗೆ ಅನುಗುಣವಾಗಿ ಎಲ್ಲರೂ ಲಸಿಕೆ ಪಡೆದುಕೊಳ್ಳಿ. ಇದರ ಬಗ್ಗೆ ಯಾವುದೇ ಭಯ ಬೇಡ, ಸಂಪೂರ್ಣ ಸುರಕ್ಷಿತವಾಗಿದೆ ಪಂಚಾಯಿತಿಯ ಮದನೂರ ಮತ್ತು ಖತಗಾಂವ ಗ್ರಾಮದ ಪ್ರತಿಯೊಬ್ಬರೂ ತಪ್ಪದೇ “ಆರೋಗ್ಯ ಆಪ್” ಮುಖಾಂತರ ನೊಂದಾಯಿಸಿಕೊಂಡು ಕಡ್ಡಾಯವಾಗಿ ಹಿಂಜರಿಯದೆ ಲಸಿಕೆ ಹಾಕಿಕೊಳ್ಳಲು ಕೈಜೋಡಿಸಿ ಮನವಿ ಮಾಡಿದರು.

ಗ್ರಾಮದ ಪಂಚಾಯಿತಿ ಉಪಾಧ್ಯಕ್ಷ ಶ್ರೀ ಜೈಪ್ರಕಾಶ್ ಬಿರಾದಾರ ಮಾತನಾಡಿ ಕೊರೊನಾ ಮಹಾಮಾರಿ ಇಂದು ಮುಕ್ತರಾಗಲು ಲಸಿಕೆ ಒಂದೇ ರಾಮಬಾಣ ಎಲ್ಲರೂ ಸಹಕಾರಿಸಿ ಲಸಿಕೆ ಪಡೆಯುವದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಗೃಹಬಂಧನದಲ್ಲಿ ಇರುವಂತೆ ಮನವಿ ಮಾಡಿದರು.

ಗ್ರಾಮ ಮುಖಂಡರಾದ ಶ್ರೀ ಶಶಿಕಾಂತ್ ಪಾಟೀಲ್, ವೈಜಿನಾಥ ದಾಬಕೆ, ದೇವಿದಾಸ ಪಿಚರಟ್ಟೆ, ಗ್ರಾಮ ಪಂಚಾಯತ್ ಸದಸ್ಯ ಇಸ್ಮಾಯಿಲ್ ಜಾಫರ್, ಪಂಚಾಯತ್ ಸಿಬ್ಬಂದಿ ಶಶಿಕಾಂತ್ ಬಿರಾದಾರ, ರಾಹುಲ್ ಪಿಚರಟ್ಟೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.