ಆರೋಗ್ಯವೇ ಭಾಗ್ಯ, ಆರೋಗ್ಯವಂತರಾಗಿ ಬಾಳಿ:ಡಾ.ಮದ್ದರಕಿ

ತಾಳಿಕೋಟೆ:ಜೂ.11: ವೈಧ್ಯಕೀಯವಾಗಿ ಮುಂದುವರೆದಂತೆ ರೋಗಗಳು ಸಹೇತ ಅಷ್ಟೇ ಮುಂದುವರೆಯುತ್ತಾ ಸಾಗಿವೆ ಆದರೆ ರೋಗಗಳು ಬರದಂತೆ ನೋಡಿಕೊಳ್ಳುವದು ಬಹಳೇ ಮುಖ್ಯವೆಂದು ವಿಜಯಪುರದ ತಜ್ಞವೈಧ್ಯರಾದ ಡಾ.ರವೀಂದ್ರ ಮದ್ದರಕಿ ಅವರು ನುಡಿದರು.

ಶನಿವಾರರಂದು ಸ್ಥಳೀಯ ಸಜ್ಜನ(ಶ್ರೀ ಸಿದ್ದ) ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಹಾಗೂ ಡಾ.ಮದ್ದರಕಿ ಅವರ ಯಶೋಧಾ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಏರ್ಪಡಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಭಿರದಲ್ಲಿ ಸುಮಾರು 200 ಕ್ಕೂ ಮೇಲ್ಪಟ್ಟು ವಿವಿಧ ರೋಗಗಳ ತಪಾಸಣೆಗಾಗಿ ಆಗಮಿಸಿದ ಜನತೆಯ ರೋಗ ತಪಾಸಣಾ ಕಾರ್ಯ ನಡೆಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ರೋಗಬಂದ ಮೇಲೆ ಏಚ್ಚರ ವಹಿಸುವದಕ್ಕಿಂತ ಯಾವುದೇ ರೋಗ ಬರುವ ಮುಂಚೆಯೆ ಜಾಗೃತರಾಗುವದು ಅವರ್ಶಯವಾಗಿದೆ ಎಂದರು. ಇಂದಿನ ದಿನಮಾನದಲ್ಲಿ ಬಿಪಿ ಶುಗರ್ ರೋಗಗಳು ಜಾಸ್ತಿ ಆಗುತ್ತಾ ಸಾಗಿವೆ ಇಂತಹ ರೋಗಗಳನ್ನು ತಡೆಗಟ್ಟುವಿಕೆ ಬಾರದಂತೆ ನೋಡಿಕೊಳ್ಳುವದು ಭಾರಿ ಗಂಡಾಂತರದಿಂದ ಪಾರಾಗಿ ಕೇವಲ ನಮ್ಮ ಮನೆತನ ವಷ್ಟೇ ಅಲ್ಲಾ ನಮ್ಮ ಊರು ನಗರ ಪಟ್ಟಣ ನಮ್ಮ ದೇಶವನ್ನು ಕಾಪಾಡಬಹುದಾಗಿದೆ ಎಂದ ಡಾ.ಮದ್ದರಕಿ ಅವರು ಯಾವುದೇ ರೋಗದಿಂದ ತೊಂದರೆಗೊಳಗಾದರೆ ಇಡೀ ನಮ್ಮ ಮನೆತನವೇ ಹಾಳಾಗುವ ಸ್ಥಿತಿ ಬರಲಿದೆ ಕಾರಣ ಆರೋಗ್ಯ ತಪಾಸಣೆಗೆ ಆಗಮಿಸಿದ ಎಲ್ಲ ಜನತೆ ಏಚ್ಚರವಹಿಸಿ ರೋಗಗಳು ಬರದಂತೆ ಮುನ್ನೇಚ್ಚರಿಕೆ ವಹಿಸಿ ಯಾವುದೇ ರೋಗ ಕಂಡುಬಂದಲ್ಲಿ ಕೂಡಲೇ ವೈಧ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕೆಂದರು.

ಇನ್ನೋರ್ವ ಶ್ರೀ ಸಿದ್ದ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ತಾಳಿಕೋಟೆ ಸಮೂದಾಯ ಆರೋಗ್ಯ ಕೇಂದ್ರದ ನಿವೃತ್ತ ವೈಧ್ಯಾದಿಕಾರಿ ಡಾ.ಕಮಲಾ ಸಜ್ಜನ ಅವರು ಮಾತನಾಡಿ ತಾಳಿಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರ ಹಾಗೂ ಗ್ರಾಮಸ್ಥರ ಅನುಕೂಲಕ್ಕಾಗಿ ಮುಂಬರುವ ದಿನಮಾನಗಳಲ್ಲಿ ಸುಮಾರು ಎರಡ್ಮೂರು ತಿಂಗಳಿಗೊಮ್ಮೆಯಾದರೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸುವ ಕಾರ್ಯಕ್ಕೆ ಮುಂದಾಗಬೇಕೆಂಬ ಆಸೆ ನಮ್ಮದಾಗಿದೆ ಕಾರಣ ತಾಳಿಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆ ತಮ್ಮಲ್ಲಿ ಯಾವುದೇ ತರಹದ ರೋಗ ರುಜು ಕಂಡುಬಂದಲ್ಲಿ ನಮ್ಮ ಆಸ್ಪತ್ರೆಗೆ ಆಗಮಿಸಿ ತಿಳಿಸಿದಲ್ಲಿ ಅದಕ್ಕೆ ಸೂಕ್ತ ಚಿಕೀತ್ಸೆ ನೀಡಿ ಹೆಚ್ಚಿನ ಚಿಕೀತ್ಸೆಯೂ ಕಂಡುಬಂದಲ್ಲಿ ತಜ್ಞವೈಧ್ಯರಲ್ಲಿಯೂ ಕೂಡಾ ತಿಳಿಸಿ ಅವರನ್ನು ಕರೆಯಿಸಿ ಸೂಕ್ತ ಚಿಕೀತ್ಸೆ ನೀಡುವಂತಹ ಕಾರ್ಯ ನಾವು ಮಾಡುತ್ತೇವೆಂದರು.

ಇನ್ನೋರ್ವ ಡಾ.ಎನ್.ಜಿ.ಮೂಲಿಮನಿ ಅವರು ಮಾತನಾಡಿ ಯಾವಾಗಲೂ ಮನುಷ್ಯರಾದ ನಾವು ಆರೋಗ್ಯದ ಬಗ್ಗೆ ಲಕ್ಷವಿಡಬೇಕು ಆರೋಗ್ಯವೊಂದಿದ್ದರೆ ಇಡೀ ಜೀವನವೇ ಆದರ್ಶಮಯ ಜೀವನವಾಗಿ ಸಾಗಲಿದೆ ಕಾರಣ ಯಾವುದೇ ಅಲ್ಪ ಸ್ವಲ್ಪ ರೋಗು ಕಂಡುಬಂದಲ್ಲಿ ವೈಧ್ಯರ ಸಲಹೆಪಡೆದುಕೊಂಡು ಕೂಡಲೇ ಚಿಕೀತ್ಸೆ ಪಡೆದುಕೊಂಡಲ್ಲಿ ಜೀವನ ಸಾರ್ಥಕವಾಗಲಿದೆ ಎಂದರು.

ಈ ಶಿಭಿರದಲ್ಲಿ ಅಪೇಂಡಿಕ್ಸ್, ಹರ್ನಿಯ, ಚೇರುಭಾವು, ಎದೆಯಲ್ಲಿಯ ಗಂಟು, ಪಿತ್ತಕೋಶ ತೊಂದರೆ, ಗರ್ಬಕೋಶದ ತೊಂದರೆ, ಮೂಲವ್ಯಾದಿ, ಫಿಸ್ತೂಲಾ, ಅಲ್ಲದೇ ವಾಸಿಯಾಗದ ಗಾಯಗಳು ಕಾಲಿನ ನರಭಾವು, ಸುಟ್ಟ ಗಾಯಗಳು, ಕಿಡ್ನಿಯ ಹರಳು, ಅಲ್ಲದೇ ಮೂತ್ರಕೋಶ ತೊಂದರೆಗಳು, ಮೂಗಿನಲ್ಲಿಯ ಗಡ್ಡೆ, ಕಿವಿ, ಮೂಗು ಮತ್ತು ಬಾಯಿ ತೊಂದರೆ, ಗಂಟಲಿನ ತೊಂದರೆ ಹಾಗೂ ಬಂಜೆತನದ ನಿವಾರಣೆ ಕುರಿತು ಸಲಹೆ ಸೂಚನೆಗಳನ್ನು ನೀಡಲಾಯಿತ್ತಲ್ಲದೇ ಆಯಾ ರೋಗಗಳ ತಕ್ಕಂತೆ ಔಷಧೋಪಚಾರ ಮಾಡಲಾಯಿತು.

ಈ ತಪಾಸಣಾ ಕಾರ್ಯದಲ್ಲಿ ವಿಜಯಪುರದ ಡಾ.ಸುನೀಲ್ ಸಜ್ಜನ, ಡಾ.ಶಿವಶಂಕರ ಅಜೂರ, ಡಾ.ಫವನ್ ಎನ್.ಎಂ., ಡಾ.ಅಮೃತಾ ಜಿ.ಎನ್., ಡಾ.ಪುನಿತ ಮೂಲಿಮನಿ, ಹಾಗೂ ಯಶೋದಾ ಆಸ್ಪತ್ರೆಯ ಸಿಬ್ಬಂದಿ ವೈಭವ ಜಾಧವ, ಮಹಾಂತೇಶ ಪೋಲೇಶಿ, ಪ್ರೀಯಾಂಕಾ, ಗಣೇಶ ಪೂಜಾರಿ, ಡಾ.ಸಂಜು ರಾಠೋಡ, ಭೀಮನಗೌಡ, ತಾಳಿಕೋಟೆ ಆಸ್ಪತ್ರೆಯ ಸಿಬ್ಬಂದಿವರಾದ ವಿಧ್ಯಾ ನಾಡಕರಣಿ, ವಿಣಾ ಮಸ್ಕಾನಾಳ, ಕಿರಣ ಅಗಸರ, ಲಕ್ಷ್ಮೀ, ಆಕಾಶ ಗಾರಂಪಳ್ಳಿ, ಸಾನಿಯಾ, ನೂರಜಾನ ಕಟಗಿ, ರಾಜಬಿ ಕೊಂಡಗೂಳಿ, ಸುಜಾತಾ ಕಾರಗನೂರ, ಕುಲಸೂಮಾ, ಫಾರೂಕ, ವಿಜಯಕುಮಾರ ಜಮ್ಮಲದಿನ್ನಿ, ಭರತ ಬಿರಾದಾರ ಅವರು ಭಾಗವಹಿಸಿ ಆಯಾ ಸಂಬಂದಿತ ರೋಗಗಳನ್ನು ತಪಾಸಣೆ ನಡೆಸಿ ಸೂಕ್ತ ಸಲಹೆಗಳನ್ನು ನೀಡಿದರು.

ಡಾ.ಎನ್.ಜಿ.ಮೂಲಿಮನಿ ಸ್ವಾಗತಿಸಿ ವಂದಿಸಿದರು.