ಆರೋಗ್ಯವಾದ ಸಮಾಜ ಕಟ್ಟುವುದು ನಮ್ಮ ಉದ್ದೇಶ – ದಿನೇಶ್ ಗುಂಡೂರಾವ್

ಇಂದ್ರಧನುಷ್ ೫.೦ ಮಿಷನ್ ಅಭಿಯಾನಕ್ಕೆ ಚಾಲನೆ

ರಾಯಚೂರು,ಆ.೭- ಮಿಷನ್ ಇಂದ್ರಧನುಷ್ ೫.೦ ಅಭಿಯಾನ ಒಂದು ವಿಶೇಷ ಕಾರ್ಯಕ್ರಮ ಲಸಿಕೆ ಅಭಿಯಾನಗಳು ಬಹಳ ವರ್ಷಗಳಿಂದ ಹಿಂದೆಯೆ ಜಾರಿಗೆ ಬಂದಿವೆ. ಹಲವು ರೋಗಗಳ ನಿವಾರಣೆಗೆ ಇಂಥ ಲಸಿಕೆಗಳು ಉಪಯುಕ್ತಕಾರಿಯಾಗಿ ಉತ್ತಮ ಆರೋಗ್ಯಕ್ಕಾಗಿ ಎಲ್ಲಾ ಜನರಿಗೆ ತಲುಪಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ದಿನೇಶ್ ಗುಂಡೂರಾವ್ ಹೇಳಿದರು.
ಅವರಿಂದ ನಗರದ ಎಲ್ ಬಿಎಸ್ ನಗರ ಆಶ್ರಯ ಕಾಲೋನಿಯಲ್ಲಿ ಏರ್ಪಡಿಸಿದ್ದ ಪರಿಣಾಮಕಾರಿ ಮಿಷನ್ ಇಂದ್ರಧನುಷ್ ೫.೦ ರಾಜ್ಯಮಟ್ಟದ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ ” ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆಯಾದ ರಾಯಚೂರು ಜಿಲ್ಲೆಗೆ ಮುಖ್ಯಮಂತ್ರಿಗಳ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡುವ ಮೂಲಕ ವಿಶೇಷವಾದ ಗಮನ ಕೊಡಲಾಗುವುದು. ಜಿಲ್ಲೆಯ ೨೩ ಸಮುದಾಯ ಆರೋಗ್ಯ ಕೇಂದ್ರಗಳಿಗೆ ವಿಶೇಷ ಹೊತ್ತು ನೀಡಿ ಸಿಬ್ಬಂದಿಗಳ ನೇಮಕ ಪ್ರಕ್ರಿಯೆ, ಆರೋಗ್ಯ ಪರಿಕರಗಳು ಮೂಲಭೂತ ಸೌಕರ್ಯಗಳನ್ನು ನೀಡುವುದರೊಂದಿಗೆ ಎಂಬಿಬಿಎಸ್ ಓದಿದ ವೈದ್ಯರನ್ನು ಗ್ರಾಮೀಣ ಭಾಗದಲ್ಲಿ ಕಳಿಸಿ ಜನರ ಆರೋಗ್ಯವನ್ನು ಕಾಪಾಡುವಂಥ ಕೆಲಸ ಕೂಡ ನಮ್ಮ ಇಲಾಖೆಯಿಂದ ಮಾಡಲಾಗುತ್ತದೆ. ಹಾಗೂ ಜಿಲ್ಲೆಗೆ ಮುಂದಿನ ದಿನಗಳಲ್ಲಿ ಆಶಾಕಿರಣ ಎನ್ನುವ ವಿಶೇಷವಾದ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಏರ್ಪಡಿಸುತ್ತೇವೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್, ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜ, ಶಾಸಕರಾದ ದದ್ದಲ್ ಬಸನಗೌಡ, ಹಂಪಯ್ಯ ಸಾಹುಕಾರ, ಜಿಲ್ಲಾಧಿಕಾರಿಗಳಾದ ಚಂದ್ರಶೇಖರ ನಾಯಕ, ಪೋಲೀಸ್ ವರಿಷ್ಠಾಧಿಕಾರಿಗಳಾದ ನಿಖಿಲ್.ಬಿ, ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಕುಮಾರ್. ಬಿ, ಅಭಿಯಾನದ ನಿರ್ದೇಶಕರಾದ ನವೀನ್ ಭಟ್ ವೈ, ಆಯುಕ್ತರಾದ ರಣದೀಪ್, ಇಲಾಖೆಯ ಮುಖ್ಯಸ್ಥರಾದ ಡಾ.ಸುರೇಂದ್ರ ಬಾಬು, ನಿರ್ದೇಶಕರಾದ ಇಂಧುಮತಿ, ಎಪಿಎಂಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ ತಲಮಾರಿ ಮತ್ತು ನಗರಸಭೆ ಸದಸ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.