ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮೆಲ್ಲರ ಧ್ಯೇಯ:ಡಾ.ಕಿರಣ ಪಾಟೀಲ್

ಬೀದರ,ಮಾ.11: ಆರೋಗ್ಯವಂತ ಸಮಾಜ ನಿರ್ಮಾಣದ ಉದ್ದೇಶದಿಂದ ಕೇಂದ್ರ, ರಾಜ್ಯ ಸರ್ಕಾರದ 44 ಕ್ಕೂ ಹೆಚ್ಚು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆಂದು ಬೀದರ ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ. ಕೀರಣ ಪಾಟೀಲ್ ಹೇಳಿದರು.

ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೀದರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಿ ಇಲಾಖೆ ಮಾಹಿತಿ ಶಿಕ್ಷಣ ಸಂವಹ ವಿಭಾಗದ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಮಾಧ್ಯಮ ಮಿತ್ರರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಆರ್ಯುವೇದ, ಯುನಾನಿ ಸೇರಿದಂತೆ ಹಲವಾರು ಚಿಕಿತ್ಸಾ ಪದ್ದತಿಗಳು ಜಾರಿಯಲ್ಲಿದ್ದರು ಜನರಿಗೆ ರೋಗಗಳನ್ನು ತಡೆಗಟ್ಟುವ ಮುಂಜಾಗೃತೆಯ ಕ್ರಮಗಳ ಮಾಹಿತಿ ಕೊರತೆಯಿಂದ ಹೆಚ್ಚು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅವರಿಗೆ ಸರಿಯಾದ ಮಾಹಿತಿ ನೀಡಿದಲ್ಲಿ ಅವರು ಇಂತಹ ರೋಗಗಳಿಂದ ಪಾರಾಗಬಹುದು. ಆದ್ದರಿಂದ ಜನರಿಗೆ ಹೆಚ್ಚಿನ ಅರಿವು ಮೂಡಿಸುವ ಜವಾಬ್ದಾರಿ ಮಾಧ್ಯಮ ಮಿತ್ರರು ಹಾಗೂ ಆರೋಗ್ಯ ಇಲಾಖೆಯ ಮೇಲಿದೆ ಎಂದು ಹೇಳಿದರು.

ಜಿಲ್ಲೆಯ ಜನರಲ್ಲಿ ಆಯುಷ್ಮಾನ್ ಭಾರತ, ಈ ಸಂಜೀವಿನಿ, ಅಂಗಾಂಗ ಕಸಿ ಯೋಜನೆ ಸೇರಿದಂತೆ ಹಲವಾರು ಸರ್ಕಾರದ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಅರವು ಮೂಡಿಸಬೇಕಾಗಿದೆ. ಆಯುಷ್ಮನ್ ಭಾರತ ಯೋಜನೆಯೂ ಯಶಸ್ವಿಯಾಗಿ ಜಾರಿಯಾಗುತ್ತಿದ್ದರು ಜಿಲ್ಲೆಯ ಹೆಚ್ಚಿನ ಜನರು ಈ ಕಾರ್ಡು ಇನ್ನುವರೆಗೆ ಪಡೆದಿಲ್ಲಾ ಆದರಿಂದ ಯಾರು ಈ ಕಾರ್ಡು ಪಡೆದಿಲ್ಲವೊ ಅವರು ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ, ಗ್ರಾಮ ಪಂಚಾಯತ್, ಹಾಗೂ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಆರೋಗ್ಯ ಕೇಂದ್ರಗಳಲ್ಲಿ ಭೇಟಿ ನೀಡಿ ಈ ಕಾರ್ಡುಗಳನ್ನು ಮಾಡಿಸಿಕೊಳ್ಳಬಹುದು ಎಂದು ಹೇಳಿದರು.

ಆಯುಷ್ಮಾನ್ ಭಾರತ ಹಾಗೂ ಆರೋಗ್ಯ ಕರ್ನಾಟಕ ಯೊಜನೆಯಡಿಯಲ್ಲಿ ಎಪಿಎಲ್ ಕಾಡುದಾರಿಗೆ 30 ಪ್ರತಿಶತ ರಿಯಾಯಿತಿ ಹಾಗೂ ಬಿಪಿಎಲ್ ಕಾರ್ಡುದಾರಿಗೆ ವಾರ್ಷಿಕ 5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಸರ್ಕಾರಿ ಅಥವಾ ಖಾಸಗಿ ನೊಂದಾಯಿತ ಆಸ್ಪತ್ರೆಯಲ್ಲಿ ಪಡೆಯಬಹದು, ಅಂಗಾಂಗ ಕಸಿ ಯೋಜನೆ ಅಡಿ ಕಿಡ್ನಿ ಕಸಿಗೆ 2 ಲಕ್ಷ, ಹೃದಯ ಕಸಿಗೆ 5 ಲಕ್ಷ ಹಾಗೂ ಬಹು ಅಂಗಾಂಗ ಕಸಿಗೆ 10 ಲಕ್ಷದವರೆಗೆ ಹಣವನ್ನು ಸರ್ಕಾರ ಭರಿಸಲಿದೆ ಎಂದರು. ಸರ್ಕಾರವು ಜೀವನ ಸಾರ್ಥಕ ಹಾಗೂ ಈ ಸಂಜೀವಿನಿ ಮೊಬೈಲ್ ಆ್ಯಪ್ ಜಾರಿಗೆ ತಂದಿದ್ದು, ಜೀವನ ಸಾರ್ಥಕ ಆ್ಯಪ್ ಅಂಗಾಂಗ ಧಾನಕ್ಕೆ ಸಂಬಂಧಿಸಿದ ಮಾಹಿತಿ ನೀಡಿದರೆ, ಈ ಸಂಜೀವಿನಿ ಕುಂತಲಿಯೇ ಆರೋಗ್ಯ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹಾಗೂ ಚಿಕಿತ್ಸೆಯ ಮಾಹಿತಿ ಒದಗಿಸಲಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪಾ ಕಾಂಬಳೆ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರ ಆರೋಗ್ಯ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲು ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ, ಜಾನಪದ ಕಲೆ ಸೇರಿದಂತೆ ವಿವಿಧ ರೀತಿಯಲ್ಲಿ ಅರಿವು ಮೂಡಿಸಲಾಗುತ್ತಿದೆ ಇದರ ಜೊತೆಗೆ ಮಾಧ್ಯಮ ಮಿತ್ರರೂ ಇನ್ನು ಹೆಚ್ಚಿನ ಒತ್ತು ನೀಡಿ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಹೇಳಿದರು.

ವಾರ್ತಾ ಇಲಾಖೆಯ ವಿಜಯಕೃಷ್ಣ ಮಾತನಾಡಿ ಇಂತಹ ಕಾರ್ಯಗಾರವು ಹಮ್ಮಿಕೊಳ್ಳುವದರಿಂದ ಮಾಧ್ಯಮ ಮಿತ್ರರೂ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದು, ಮಾಧ್ಯಮದ ಮೂಲಕ ಗ್ರಾಮಿಣ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ಅನೂಕುಲವಾಗುತ್ತದೆ ಆದರಿಂದ ಹೆಚ್ಚೆಚ್ಚು ಇಂತಹ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆ ಆಯೋಜನೆ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಸಾಹಾಯಕ ತಬ್ರೇಜ್ ಡೆಂಗ್ಯೂ ಕಾಯಿಲೆ ಬಗ್ಗೆ ಮಾಹಿತಿ ನೀಡಿದರು, ಈ ಸಂದರ್ಭದಲ್ಲಿ ಆರ್.ಸಿ.ಎಚ್ ಅಧಿಕಾರಿ ರಾಜಶೇಖರ ಪಾಟೀಲ್, ಆಯುಷ್ಮಾನ್ ಭಾರತ ಯೋಜನೆ ಜಿಲ್ಲಾ ಸಂಯೋಜನಾಧಿಕಾರಿ ಪೂಜಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುನಿತಾ,ಜಿಲ್ಲಾ ಆರೋಗ್ಯ ಕಛೇರಿಯ ಡಿಎನ್‍ಓ ಶಾಲುಬಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.