ಆರೋಗ್ಯವಂತ ಸಮಾಜಕ್ಕೆ ಕೊರೋನಾ ಲಸಿಕೆ ಪಡೆಯಬೇಕು

ಕೆ.ಆರ್.ಪೇಟೆ. ಜೂ.03: ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ತಾಲ್ಲೂಕು ಆಡಳಿತವು ನಿಗಧಿಗೊಳಿಸಿರುವ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಕೊರೋನಾ ಲಸಿಕೆಯನ್ನು ಪಡೆಯಬೇಕು ಅದಕ್ಕಾಗಿ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಸಮೀರ್ ಪಿ.ನಂದ್ಯಾಲ್ ತಿಳಿಸಿದರು.
ಅವರು ಪಟ್ಟಣದ ಹೊಸಹೊಳಲು ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿರುವ ಲಸಿಕಾ ಕೇಂದ್ರದಲ್ಲಿ ವಕೀಲರುಗಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊರೋನಾ ನಿಯಂತ್ರಿಸುವ ಸಲುವಾಗಿ ಸರ್ಕಾರ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಹಾಗೂ ವಿವಿಧ ಸ್ಥರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳು ನಿಮಗೆ ನಿಗಧಿಗೊಳಿಸಲಾದ ದಿನಾಂಕದಂದು ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯುವ ಮೂಲಕ ನಿಮ್ಮನ್ನೇ ನಂಬಿರುವ ಕುಟುಂಬಗಳಿಗೆ ರಕ್ಷಣೆ ಒದಗಿಸಬೇಕು.
ಲಸಿಕಾ ಕೇಂದ್ರದಲ್ಲಿ ಯಾವುದೇ ಗಲಾಟೆಗೆ ಅವಕಾಶ ನೀಡದೇ ದೈಹಿಕ ಅಂತರ ಕಾಪಾಡಿಕೊಂಡು ಲಸಿಕೆ ಪಡೆಯಬೇಕು. ಸಾರ್ವಜನಿಕರಿಗೆ ಹಾಗೂ ಅವಿದ್ಯಾವಂತರಿಗೆ ತಿಳಿದವರು ಕೊರೋನಾ ಪರಿಣಾಮಗಳ ಬಗ್ಗೆ ಅರಿವು ಮೂಢಿಸಿ ಅವರುಗಳು ಮಾಸ್ಕ್ ಧಾರಣೆ, ಸೋಪಿನಿಂದ ಕೈತೊಳೆಯುವಿಕೆ, ಗುಂಪಾಗಿ ಸೇರದಿರುವುದು ಮುಂತಾದವುಗಳನ್ನು ತಿಳಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ನ್ಯಾಯಾಧೀಶರುಗಳಾದ ಬಸವರಾಜ ತುಳಸಪ್ಪ ನಾಯಕ, ಫಾರುಕ್ ಝಾರೆ, ತಹಶೀಲ್ದಾರ್ ಎಂ.ಶಿವಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂಧನ್, ಪುರಸಭಾ ಮುಖ್ಯಾಧಿಕಾರಿ ಸತೀಶ್‍ಕುಮಾರ್,
ವಕೀಲರ ಸಂಘದ ಕಾರ್ಯದರ್ಶಿ ಮೋಹನ್‍ಕುಮಾರ್, ಖಜಾಂಚಿ ಯೋಗೇಶ್ ಸೇರಿದಂತೆ ಹಲವಾರು ವಕೀಲರುಗಳು ಹಾಜರಿದ್ದರು.