ಆರೋಗ್ಯವಂತ ಶಿಶು ಪ್ರದರ್ಶನ, ಆರೋಗ್ಯ ಶಿಕ್ಷಣ ಕಾರ್ಯಕ್ರಮ

ಚಿತ್ರದುರ್ಗ.ನ.೮;  ಚಿತ್ರದುರ್ಗದ ಮಠದ ಕುರುಬರಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ  ಆರೋಗ್ಯ ಇಲಾಖೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ “ಆರೋಗ್ಯವಂತ ಶಿಶು ಪ್ರದರ್ಶನ ಮತ್ತು ಆರೋಗ್ಯ ಶಿಕ್ಷಣ ಕಾರ್ಯಕ್ರಮ”ಜರುಗಿತು.ಮಠದ ಕುರುಬರಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯೆ ಮಹಂತಮ್ಮ ಅವರು ಆರೋಗ್ಯವಂತ ಶಿಶು ಪ್ರದರ್ಶನ, ಆರೋಗ್ಯ ಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಈ ಕಾರ್ಯಕ್ರಮವು ತಾಯಿ ಮಕ್ಕಳಿಗೆ ಪೆÇ್ರೀತ್ಸಾಹಿಸುವ ಕಾರ್ಯಕ್ರಮ. ತಾಯಂದಿರು ಮಕ್ಕಳ ಬೆಳವಣಿಗೆ ಆರೈಕೆಗೆ ಸಹಕಾರಿಯಾಗಿದೆ ಎಂದರು.ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ತಾಯಿಯರು ಗರ್ಭಿಣಿ ಆರೈಕೆ ಸರಿಯಾಗಿ ಮಾಡಿಕೊಳ್ಳಬೇಕು.  ಗರ್ಭದಲ್ಲಿ ಮಗು ಇರುವುದರಿಂದ ಮಗುವಿನ ಬೆಳವಣಿಗೆಗೆ ಪೌಷ್ಟಿಕಾಹಾರ ಸೇವನೆ ಮಾಡಬೇಕು. ಬೇಳೆಕಾಳುಗಳು ದವಸ ಧಾನ್ಯ ತರಕಾರಿ ಹಣ್ಣು ಹಾಲು ಲಘು, ವ್ಯಾಯಾಮ ಹೆರಿಗೆ ಪೂರ್ವ ಸಿದ್ಧತೆ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಉಚಿತ ತಪಾಸಣೆ ಚಿಕಿತ್ಸೆ ಪಡೆದು ಸಹಜ ಹೆರಿಗೆಗೆ ಸಿದ್ಧರಾಗಬೇಕು. ಮಕ್ಕಳಿಗೆ ಹುಟ್ಟಿದ ಕೂಡಲೆ ಎದೆ ಹಾಲು ಉಣಿಸಬೇಕು. ಗಿಣ್ಣುವಿನ ಹಾಲು ಮಕ್ಕಳಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಕ್ಕಳ ಆರೈಕೆ ಮಾಡುವುದರಿಂದ ಶಿಶು ಮರಣ ಪ್ರಮಾಣ ತಗ್ಗಿಸಬಹುದು ಎಂದರು.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ  ಶ್ರೀಧರ್, ಪೌಷ್ಟಿಕಾಹಾರ ಪ್ರಾತ್ಯಕ್ಷಿಕೆ ಮೂಲಕ ಆಹಾರಗಳಿಂದ ದೊರೆಯುವ ಪೌಷ್ಠಿಕಾಂಶದ ಬಗ್ಗೆ ಅರಿವು ಮೂಡಿಸಿದರು.ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಶಿಲ್ಪಾ ಅವರು 12 ಮಾರಕ ರೋಗಗಳ ವಿರುದ್ಧ ನೀಡುವ ಲಸಿಕಾ ಕಾರ್ಯಕ್ರಮ ಸಂಪೂರ್ಣ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ  ಪ್ರಥಮ, ದ್ವಿತೀಯ ಮತ್ತು ತೃತೀಯ ರೂ.300/-, ರೂ.200/- ಮತ್ತು ರೂ.100/- ಅನುಕ್ರಮವಾಗಿ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಶಾಂತ್, ಅಂಗನವಾಡಿ ಕಾರ್ಯಕರ್ತೆಯರಾದ ನಗೀನಾ ಬಾನು, ಭಾಗೀರಥ, ಸೀಮಬಾನು ನಾಗವೇಣಿ, ಆಶಾ ಕಾರ್ಯಕರ್ತೆಯರಾದ ಶಿವಮಾಲ, ವೀರಮ್ಮ, ದ್ರಾಕ್ಷಾಯಣಿ ಇದ್ದರು.