ಆರೋಗ್ಯವಂತ ಶಿಶು ದೇಶದ ಸಂಪತ್ತು

ಸಂಡೂರು :ನ:21 ಶಿಶು ಮರಣಗಳನ್ನು ತಪ್ಪಿಸಲು( ಅಂಕಿ ಅಂಶಗಳ ಪ್ರಕಾರ ಒಂದು ವರ್ಷದಲ್ಲಿ ಜನಿಸಿದ ಒಂದು ಸಾವಿರ ಜನನಗಳಿಗೆ 28 ಶಿಶುಗಳು ಮರಣ ಹೊಂದುತ್ತಲಿವೆ ) ತಾಯಂದಿರಿಗೆ ಶಿಶು ಆರೈಕೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಂದಿನಿಂದ ಮೂರು ದಿನಗಳ ಕಾಲ ಐ.ಇ.ಸಿ/ಎಸ್.ಬಿ.ಸಿ.ಸಿ ಕಾರ್ಯಕ್ರಮಗಳ ಅಡಿಯಲ್ಲಿ ತಾಲುಕಿನಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು
ವಡ್ಡು ಗ್ರಾಮದಲ್ಲಿ ಮತ್ತು ತಾಳೂರು ಗ್ರಾಮದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ತಾಯಂದಿರಿಗೆ ಶಿಶುವಿನ ಆರೈಕೆ ಮಾಡುವ ವಿಧಾನಗಳು, ಎದೆ ಹಾಲಿನ ಮಹತ್ವ, ಆರು ತಿಂಗಳ ನಂತರ ಎದೆ ಹಾಲಿನೊಂದಿಗೆ ಪೂರಕ ಆಹಾರ ನೀಡುವುದು, ಹನ್ನೊಂದು ಮಾರಕ ರೋಗಗಳ ವಿರುದ್ಧ ಲಸಿಕೆಯನ್ನು ಪೂರ್ಣ ಹಾಕಿಸುವುದು, ಶಿಶು ಚಟುವಟಿಕೆಯಿಂದ ಇರುವ ಹಾಗೆ ಅಟಿಕೆಗಳಿಂದ ಆಟ ಆಡಿಸುವುದು ಹಿಗೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು,ಆರೋಗ್ಯವಂತ ಶಿಶು ದೇಶದ ಸಂಪತ್ತು ಅನ್ನುವ ಭಾವನೆಯನ್ನು ಮೂಡಿಸಲಾಯಿತು, ಭಾಗವಹಿಸಿದ ಮಕ್ಕಳಲ್ಲಿ ಪೂರ್ಣ ಲಸಿಕೆ ಪಡೆದಂತಹ,ಸರಿಯಾದ ತೂಕ ಮತ್ತು ಎತ್ತರ ಉಳ್ಳ ಮೂರು ಮಕ್ಕಳನ್ನು ಆಯ್ಕೆ ಮಾಡಿಕೊಂಡು ಪ್ರಥಮ- 300/-,ದ್ವಿತೀಯ-200/- ತೃತೀಯ-100/- ರೂ ಗಳ ನಗದು ಬಹುಮಾನವನ್ನು ನೀಡಲಾಯಿತು,ವಡ್ಡು ಗ್ರಾಮದಲ್ಲಿ ಗ್ರಾಮದ ಹಿರಿಯ ಮಹಿಳೆ ನೀಲಮ್ಮ ಅಧ್ಯಕ್ಷತೆ ವಹಿಸಿದ್ದರು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಅಂಗವಾಡಿ ಕಾರ್ಯಕರ್ತೆಯರಾದ ಪಾರ್ವತಿ, ನಾಗರತ್ನ, ಜ್ಯೋತಿ, ಪ್ರೇಮಾ,ಆಶಾ ಕಾರ್ಯಕರ್ತೆಯರಾದ ಲಕ್ಷ್ಮಿ, ಭಾರತಿ,ಸಾವಿತ್ರಮ್ಮ ಇತರರು ಭಾಗವಹಿಸಿದ್ದರು,ತಾಳೂರು ಗ್ರಾಮದಲ್ಲಿ ಗ್ರಾಮದ ನಿವೃತ್ತ ಅಂಗವಾಡಿ ಶಿಕ್ಷಕಿ ಕಸ್ತೂರಮ್ಮ ಅಧ್ಯಕ್ಷತೆ ವಹಿಸಿದ್ದರು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಅಂಗವಾಡಿ ಕಾರ್ಯಕರ್ತೆಯರಾದ ಅರುಣ,ಮಂಗಳ, ಪಕೃನ್ನಿಸಾ, ರೆಶ್ಮಾ ,ಆಶಾ ಕಾರ್ಯಕರ್ತೆಯರಾದ ಶಾಂತಮ್ಮ,ಮಂಗಳ, ಯಲ್ಲಮ್ಮ,ಹಂಪಮ್ಮ ಇತರರು ಭಾಗವಹಿಸಿದ್ದರು.