ಆರೋಗ್ಯವಂತ ಶಿಶುಗಳ ಪ್ರದರ್ಶನ

ಗಂಗಾವತಿ ಡಿ.26: ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ಶುಕ್ರವಾರ ಮಧ್ಯಾಹ್ನ ಆಯೋಜಿಸಲಾಗಿತ್ತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹನುಮಂತಪ್ಪ ಹಾಗೂ ಹಿರಿಯ ಆರೋಗ್ಯ ಸಹಾಯಕರು ಮೌನೇಶ್ ಅವರು, ಆಯುಮನ್ ಭಾರತ್, ಆರೋಗ್ಯ ಕರ್ನಾಟಕ,
ಕೋವಿಡ್-19 ಸೋಂಕಿನ ಮುಂಜಾಗ್ರತ ಕ್ರಮಗಳು, ಗರ್ಭಿಣಿಯ ಆರೈಕೆ, ಆಸ್ಪತ್ರೆ ಹೆರಿಗೆ, ನವಜಾತ ಶಿಶುವಿನ ಆರೈಕೆ, ತಾಯಿ ಎದೆಹಾಲಿನ ಮಹತ್ವ, ಕಾಂಗರೂ ಮದರ್ ಕೇರ್, ಬಾಣಂತಿ ಆರೈಕೆ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ, ಪೌಷ್ಟಿಕ ಆಹಾರ, ಕುಟುಂಬ ಕಲ್ಯಾಣ ವಿಧಾನಗಳು, ವೈಯಕ್ತಿಕ ಸ್ವಚ್ಛತೆ ಕುರಿತು ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಿರಿಯ ಆರೋಗ್ಯ ಸಹಾಯಕಿ ದೀಪಾ, ಹಾಲಮ್ಮ, ಆಶಾ ಕಾರ್ಯಕರ್ತೆ ಖಾಸಿಂಬಿ, ಜಯಾ ಕಟ್ಟಿಮನಿ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ, ಬಾಣಂತಿಯರು, ಗರ್ಭಿಣಿಯರು ಉಪಸ್ಥಿತರಿದ್ದರು.