ಆರೋಗ್ಯವಂತ ಯುವ ಶಕ್ತಿಯ ಅವಶ್ಯಕತೆಯಿದೆ : ಡಾ. ಆದಿತ್ಯ

ಧಾರವಾಡ,ಜ2 : ನಮಗೆ ಕೇವಲ ಯುವಶಕ್ತಿಗಿಂತ ಆರೋಗ್ಯವಂತ ಸದೃಢ ಮನಸಿನ, ರಚನಾತ್ಮಕ ಮನೋಭಾವದ ಯುವ ಶಕ್ತಿಯ ಅವಶ್ಯಕತೆಯಿದೆ ಎಂದು ಧಾರವಾಡ ಡಿಮ್ಹಾನ್ಸ್‍ನ ಮನೋವೈದ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಆದಿತ್ಯ ಪಾಂಡುರಂಗಿ ಹೇಳಿದರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಮಂಟಪವು ಕರ್ನಾಟಕ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಕೋಶ, ಧಾರವಾಡ ಮತ್ತು ಸ್ಥಳೀಯ ಕೆ ಎಲ್ ಇ ಸಂಸ್ಥೆಯ ಪಿ ಸಿ ಜಾಬಿನ ವಿಜ್ಞಾನ ಮಹಾವಿದ್ಯಾಲಯ, ಹುಬ್ಬಳ್ಳಿ ಇವರ ಸಹಯೋಗದಲ್ಲಿ ಹುಬ್ಬಳ್ಳಿಯ ಪಿ.ಸಿ.ಜಾಬಿನ್ ಕಾಲೇಜಿನ ಜಮಖಾನಾ ಸಭಾಂಗಣದಲ್ಲಿ ಆಯೋಜಿಸಿದ್ದ ‘ಯುವಜನಾಂಗ ಮತ್ತು ಮಾನಸಿಕ ತುಮುಲಗಳು ಹಾಗೂ ಪರಿಹಾರ’ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ನಮ್ಮನ್ನು ನಾವು ಯಾರ ಜೊತೆಗೂ ಹೋಲಿಸಿಕೊಳ್ಳದೆ ಇಟ್ಟ ಗುರಿಯನ್ನ ತಲುಪಲು ಸದಾ ಕ್ರಿಯಾಶೀಲವಾಗಿರಬೇಕು. ಜೊತೆಗೆ ಸ್ಪರ್ಧಾತ್ಮಕ ಯುಗದಲ್ಲಿ ಒತ್ತಡ ನಿರ್ವಹಣೆ ಅತಿ ಅವಶ್ಯ ಎಂದರು.
ಮುಖ್ಯ ಅತಿಥಿಗಳಾಗಿ ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಯುವಶಕ್ತಿಯು ಸಮಯ ಪರಿಪಾಲನೆಯೊಂದಿಗೆ ಮಾನಸ್ಸಿನ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.
ಧಾರವಾಡ ಕ.ವಿ.ವಿಯ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಂಯೋಜನಾಧಿಕಾರಿ ಡಾ. ಎಂ ಬಿ ದಳಪತಿ ಮಾತನಾಡಿ, ವಿಶ್ವವಿದ್ಯಾಲಯದ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿ ಇಂತಹ ಮಹತ್ವಪೂರ್ಣ ಉಪನ್ಯಾಸವನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಮಂಟಪದ ಜೊತೆಗೆ ಆಯೋಜಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ ಎಲ್ ಇ ಸಂಸ್ಥೆಯ ನಿರ್ದೇಶಕರಾದ ಶಂಕರಣ್ಣ ಮುನವಳ್ಳಿ, ನಮ್ಮನ್ನು ನಾವು ಅರಿತು ನಡೆಯಬೇಕು. ಕೈಗೆಟಕುವ ಗುರಿ ಇಟ್ಟುಕೊಂಡು ಅದನ್ನು ಯಶಸ್ವಿಯಾಗಿ ತಲುಪುವಲ್ಲಿ ಸಾಗಬೇಕು ಎಂದರು.
ಪ್ರಾಚಾರ್ಯ ಡಾ. ಲಿಂಗರಾಜ ಧ. ಹೊರಕೇರಿ ಸ್ವಾಗತಿಸಿದರು, ಪೆÇ್ರ ವಾಗ್ಮೊಡೆ ವಂದಿಸಿದರು, ಶ್ರೀಮತಿ ವಂದನಾ ಸತೀಶ ನೂಲ್ವಿ ಪ್ರಾರ್ಥಿಸಿದರು ಡಾ.ಮಹೇಶ ಧ. ಹೊರಕೇರಿ ನಿರೂಪಿಸಿದರು, ಪೆÇ್ರ ಸಂಗಮ್ಮನವರ, ಡಾ. ಹುಲಗೂರು, ಡಾ.ಕೌಜಲಗಿ, ಡಾ. ಶೇಡಂಕರ ಮುಂತಾದವರು ಉಪಸ್ಥಿತರಿದ್ದರು. ನಗರದ ಬೇರೆ ಬೇರೆ ಕಾಲೇಜಿನ 300ಕ್ಕೂ ಹೆಚ್ಚು ಸ್ವಯಂ ಸೇವಕರು ಭಾಗವಹಿಸಿದ್ದರು.